ಹುಬ್ಬಳ್ಳಿ: ಸೋನಿಯಾ ಗಾಂಧಿಯವರು ನನಗೆ ಹೊಸ ಜವಾಬ್ದಾರಿ ನೀಡಿದ್ದಾರೆ, ಪಕ್ಷದ ಎಲ್ಲ ಮುಖಂಡರ ಕೋರಿಕೆ ಮೇರೆಗೆ ನನಗೆ ಪಕ್ಷ ಹೊಸ ಜವಾಬ್ದಾರಿ ನೀಡಿದೆ. ದೇಶಕ್ಕೆ ಸ್ವಾತಂತ್ರ ತಂದು ಕೊಡುವಲ್ಲಿ ಕಾಂಗ್ರೆಸ್ ಮಹತ್ತರ ಪಾತ್ರ ವಹಿಸಿದೆ. ಬಲಿಷ್ಠ ಭಾರತ ನಿರ್ಮಾಣವಾಗಿರೋದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯುಪಿ, ಬಿಹಾರ ಜನ ನಮ್ಮಲ್ಲಿ ದುಡಿಯೋಕೆ ಬರ್ತಾರೆ. ನಮ್ಮ ರಾಜ್ಯಕ್ಕೆ ಮೆಡಿಕಲ್, ಇಂಜಿನಿಯರಿಂಗ್ ಓದೋಕೆ ನಮ್ಮ ರಾಜ್ಯಕ್ಕೆ ಬರ್ತಾರೆ. ಆದ್ರೆ ನಮ್ಮ ಸಿಎಂಗೆ ಯುಪಿ ಮಾಡೆಲ್ ಬೇಕಂತೆ. ಮೋದಿಯವರು ಸ್ವಾತಂತ್ರ್ಯದ ದಿನ ಭ್ರಷ್ಟಾಚಾರದ ವಿರುದ್ಧ ಯುದ್ದ ಸಾರ್ತಿವಿ ಅಂತಾರೆ. 40 ಪರ್ಸೆಂಟ್ ವಿರುದ್ಧ ಗುತ್ತಿಗೆದಾರರೇ ಮೋದಿಯವರಿಗೆ ದೂರು ನೀಡಿದ್ದಾರೆ.
ಅವರ ಮೇಲೆ ಯಾಕೆ ಐಟಿ, ಇಡಿ ರೇಡ್ ಹಾಕಿಲ್ಲ. ಈ ರಾಜ್ಯದಲ್ಲಿ ಸರ್ಕಾರವಿಲ್ಲಂತ ಅವರ ಸಚಿವರೇ ಹೇಳ್ತಾರೆ. ಸುಮ್ನೆ ಮ್ಯಾನೇಜ್ ಮಾಡ್ತಿದ್ದಿವಿ ಅಂತ ಮಾಧುಸ್ವಾಮಿ ಹೇಳ್ತಾರೆ. ಬಿಜೆಪಿಯವರು ಆಡಳಿತ ವ್ಯವಸ್ಥೆಯನ್ನ ಹದಗೆಡಿಸಿದ್ದಾರೆ. ನಾವು ಜನತೆ ಮನೆ ಮನೆಗೆ ಹೋಗ್ತೀವಿ. ಮತ್ತೆ ನಾವು ಈ ಭಾರಿ ಅಧಿಕಾರಕ್ಕೆ ಬರ್ತೀವಿ.
ಅಧಿಕಾರ ಬಂದ ಮೇಲೆ ಮೊದಲೆರೆಡು ವರ್ಷ ಇವರ ಪಾಪ ತೊಳಿಬೇಕು. 140-150 ಸೀಟ್ ಪಡೆದು ನಾವು ಅಧಿಕಾರಕ್ಕೆ ಬರ್ತೀವೆ. ದೇಶ ಹಾಗೂ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ನಡೆಸುವುದು ನಿಶ್ಚಿತ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/08/2022 04:13 pm