ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾಂಗ್ರೆಸ್‌ ಕೃತ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ: ಸೂಲಿಬೆಲೆ

ಧಾರವಾಡ: ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಅವರ ಬಾವಚಿತ್ರ ಸುಟ್ಟ ಪ್ರಕರಣಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಕಾಂಗ್ರೆಸ್‌ನವರ ಈ ವರ್ತನೆ ಹೊಸದೇನಲ್ಲ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾವರ್ಕರ್ ಮತ್ತು ರಾಷ್ಟ್ರಭಕ್ತರನ್ನು ಅವಮಾನಿಸುವ ಪ್ರಕ್ರಿಯೆ ಕಾಂಗ್ರೆಸ್‌ನಲ್ಲಿ ಯಾವಾಗಲೂ ಇದೆ. ದುರದೃಷ್ಟ ಎಂದರೆ ನಾವು ಧಾರವಾಡಕ್ಕೆ ಬಂದಾಗಲೇ ಹೀಗೆ ಆಗಿದೆ. ಧಾರವಾಡ ತಿಲಕ್‌ರು ಬಂದು ಹೋದ ಜಾಗ. ಆಲೂರು ವೆಂಕಟರಾಯರು ತಿಲಕ್ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ ಜಾಗ. ಕರ್ನಾಟಕದ ಏಕೀಕರಣ ಚಿಂತನೆಯ ಬೀಜ ಹಾಕಿದ ಜಾಗ. ಈ ಇತಿಹಾಸಕ್ಕೆ ದೊಡ್ಡ ಗೌರವ ಕೊಟ್ಟು ಧಾರವಾಡಕ್ಕೆ ಬಂದಿದ್ದೇವೆ ಎಂದರು.

ಕಾಂಗ್ರೆಸ್‌ನವರು ಇಂತಹ ಇತಿಹಾಸವನ್ನು ತುಚ್ಛ್ಯವಾಗಿ ತೋರಿಸುತ್ತಿದ್ದಾರೆ. ಇತಿಹಾಸ ಪುರುಷರನ್ನು ಅವಮಾನಿಸುತ್ತಿದ್ದಾರೆ. ಇಂದು ಖಂಡನೀಯ. ಇಂದು ಕಾಂಗ್ರೆಸ್‌ಗೆ ಒಳ್ಳೆಯದಲ್ಲ. ನಾವು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿದ್ದೇವೆ. ಇಂತಹ ಸಮಯದಲ್ಲಿ ಸಾವರ್ಕರ್‌ಗೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯರು ತಿದ್ದಿ ಬುದ್ದಿ ಹೇಳಬೇಕಾದ ಅಗತ್ಯವಿದೆ. ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿದ್ದನ್ನು ನಾವೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಸಾವರ್ಕರ್ ಅವರ ಭಾವಚಿತ್ರದ ಮೇಲೆ ಮೊಟ್ಟೆ ಒಡೆದಾಗ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದು ಬಹಳ ದುರದೃಷ್ಟಕರ ಎಂದರು.

Edited By : Shivu K
Kshetra Samachara

Kshetra Samachara

20/08/2022 01:54 pm

Cinque Terre

16.96 K

Cinque Terre

1

ಸಂಬಂಧಿತ ಸುದ್ದಿ