ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ದೈಹಿಕ ನ್ಯೂನತೆ ಕೊರಗು ಅಲ್ಲ ಛಲ ಎನ್ನಿ; ಶಾಸಕಿ ಕುಸುಮಾವತಿ

ಕುಂದಗೋಳ: ದೈಹಿಕ ನ್ಯೂನತೆಯನ್ನು ಕೊರಗು ಎಂದು ಭಾವಿಸದೇ ಛಲ ಎಂದು ಬದುಕಿ ಮುನ್ನಡೆಯಬೇಕು. ಅಂದಾಗಲೇ ಎಲ್ಲರಂತೆ ವಿಕಲಚೇತನರ ಬದುಕು ರೂಪುಗೊಳ್ಳಲು ಸಾಧ್ಯ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದ್ದಾರೆ.

ಕುಂದಗೋಳದ ಪ್ರವಾಸಿ ಮಂದಿರದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಇಲಾಖೆ ಯೋಜನೆಯ ಅಡಿಯಲ್ಲಿ ನೀಡಲಾದ ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ ವಿತರಿಸಿ ಅವರು ಮಾತನಾಡಿದರು. 'ಎಲ್ಲರಂತೆ ನಿಮ್ಮ ಬದುಕನ್ನು ರೂಪಿಸಿಕೊಳ್ಳಲು ಹಾಗೂ ಓಡಾಡಲು ಈ ವಾಹನ ನೀಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.

ಈ ವೇಳೆ ವಾಹನ ಪಡೆದು ವಿಕಲಚೇತನರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ್ ಗಂಗಾಯಿ, ಲಕ್ಷ್ಮಣ ಚುಳುಕಿ, ಕೆ.ಬಿ.ಕೋರಿ, ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಸದಸ್ಯರು ಹಾಗೂ ಸಾರ್ವಜನಿಕರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

19/08/2022 04:38 pm

Cinque Terre

16.94 K

Cinque Terre

1

ಸಂಬಂಧಿತ ಸುದ್ದಿ