ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿದ್ದರಾಮಯ್ಯ ನಿಜವಾದ ಕಾಂಗ್ರೆಸ್ಸಿಗರಲ್ಲ; ಜೋಶಿ ಲೇವಡಿ

ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಆಗಲಿ ಬೇರೆ ಯಾರೇ ಆಗಲಿ ಅವರ ಮೇಲೆ ಮೊಟ್ಟೆ ಎಸೆಯೋದು, ಕಪ್ಪು ಬಾವುಟ ಪ್ರದರ್ಶನ ಮಾಡುವುದು ತಪ್ಪು. ನಾನು ಇದರ ಪರವಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದದ್ದು ಸಮರ್ಥನೀಯವಲ್ಲ. ಆದರೆ ಅವರು ಸಾವರ್ಕರ್ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಸಾವರ್ಕರ್ ಬಗ್ಗೆ ಸಿದ್ದರಾಮಯ್ಯನವರ ಅಭಿಪ್ರಾಯ ಬೇರೆ ಇರಬಹುದು. ಸಾವರ್ಕರ್ ಬಗ್ಗೆ ವಿಶ್ವಾಸ, ಶ್ರದ್ಧೆ ಇದ್ದವರಿಗೆ ಅಪಮಾನವಾಗೋ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಇದು ಸರಿಯಲ್ಲ. ಸ್ವತಃ ಇಂದಿರಾ ಗಾಂಧಿ ಅವರು ಸಾವರ್ಕರ್ ಬಗ್ಗೆ ಪತ್ರ ಬರೆದಿದ್ದರು. ಅವರು ಭಾರತ ಸುಪುತ್ರ ಎಂದು ಹೊಗಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ದೊಡ್ಡದಿದೆ. ಮಹಾತ್ಮ ಗಾಂಧಿ ಕೂಡ ಸಾವರ್ಕರ್ ಹೋರಾಟವನ್ನು ನೆನಪಿಸಿದ್ದರು. ಅಲ್ಲದೇ ಬ್ರಿಟೀಷರಿಗೆ ಸಾವರ್ಕರ್ ಅವರನ್ನು ಜೈಲಿನಿಂದ ಬಿಡುವಂತೆ ಕೇಳಿಕೊಂಡಿದ್ದರು. ಆಗ ಇದ್ದವರೆಲ್ಲ ಒರಿಜಿನಲ್ ಕಾಂಗ್ರೆಸ್ಸಿಗರು. ವಿಚಾರ ಬೇಧವಿದ್ದರೂ ಗೌರವ ಹೊಂದಿದ್ದರು. ಆದರೆ, ಈಗ ನಕಲಿ ಕಾಂಗ್ರೆಸ್ ಇದೆ ಎಂದರು.

ಈ ನಕಲಿ ಕಾಂಗ್ರೆಸ್‌ನ್ನೇ ಸಿದ್ದರಾಮಯ್ಯ ವಿರೋಧಿಸುತ್ತ ಬಂದಿದ್ದಾರೆ. ಈ ಹಿಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಇವರೇ ಬೈದಿದ್ದಾರೆ. ಸ್ವಲ್ಪ ಸಿದ್ದರಾಮಯ್ಯನವರು ಹಳೆಯದನ್ನು ನೆನಪು ಮಾಡಿಕೊಳ್ಳಲಿ. ಈಗ ಸಿದ್ದರಾಮಯ್ಯ ನಕಲಿ ಕಾಂಗ್ರೆಸ್‌ನ ನಕಲಿ ಗಾಂಧಿಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲ, ಅದರಲ್ಲಿ ಸಿದ್ದರಾಮಯ್ಯ ಕೂಡ ಒರಿಜಿನಲ್ ಅಲ್ಲ. ಅದಕ್ಕಾಗಿಯೇ ಆಗಾಗ ಅವರು ಕಾಂಗ್ರೆಸ್‌ನ್ನು ಕಿತ್ತೊಗೆಯಬೇಕು ಅಂತಾರೆ. ಹೀಗಾಗಿ ಅವರ ಮನಸ್ಸಿನಲ್ಲಿ ಇನ್ನೂ ಕಾಂಗ್ರೆಸ್ ಬಂದಿಲ್ಲ. ಮುಸ್ಲಿಂ ತುಷ್ಟೀಕರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಿದ್ದು ತಿರುಕನ ಕನಸು ಕಾಣುತ್ತಿದ್ದಾರೆ. ತಿರುಕನೂ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/08/2022 02:40 pm

Cinque Terre

55.42 K

Cinque Terre

1

ಸಂಬಂಧಿತ ಸುದ್ದಿ