ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಹರ್ ಘರ್ ತಿರಂಗಾ ಅಮೃತ ಮಹೋತ್ಸವಕ್ಕೆ ಶಾಸಕರಿಂದ ಚಾಲನೆ

ಅಳ್ನಾವರ: ಪರಕೀಯರ ದಾಸ್ಯದಿಂದ ವಿಮುಕ್ತಿ ಹೊಂದಿ, ಆಗಸ್ಟ್ 15ಕ್ಕೆ 75 ವರ್ಷ ತುಂಬುತ್ತವೆ. ಈ ಸುಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಧರ್ಮವಾಗಿದೆ.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವಸಂತ ಗತಿಸಿದ ಬೆನ್ನಲ್ಲೇ ಹರ್ ಘರ್ ತಿರಂಗಾ ಅಮೃತ ಮಹೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ಶಾಸಕ ಸೆ.ಎಂ.ನಿಂಬಣ್ಣವರ ಹೇಳಿದರು.

ಪಟ್ಟಣದ ಪಂ.ಪಂಚಾಯಿತಿಯಲ್ಲಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿ ಕೊಡುವಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಶ್ರಮವಿದೆ.ಈ ಸಂದರ್ಭದಲ್ಲಿ ಅವರೆಲ್ಲರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ದೇಶಕ್ಕೆ ಹೋರಾಟ ಮಾಡಿದವರಲ್ಲಿ ಜಾತಿ,ಮತ,ಪಂಥ ಧರ್ಮ ಯಾವುದು ಇಲ್ಲ. ಎಲ್ಲರೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.ಊನ ಮುಕ್ತ ರಾಷ್ಟ್ರವನ್ನಾಗಿಸಲು ಹಲವರ ಶ್ರಮವಿದೆ ಎಂದರು.

ಈ ಸಂದರ್ಭದಲ್ಲಿ ಪ.ಪಂಚಾಯಿತಿಯ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು,ಸಾರ್ವಜನಿಕರು,ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/08/2022 08:47 am

Cinque Terre

5.8 K

Cinque Terre

1

ಸಂಬಂಧಿತ ಸುದ್ದಿ