ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುಭಾಸ ಸುಣಗಾರ, ಕಾರ್ಯದರ್ಶಿ ಉದಯ ಗೌಡರ ಅವಿರೋಧ ಆಯ್ಕೆ

ಕಲಘಟಗಿ: ತಾಲ್ಲೂಕಿನ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರತ್ಯಕ್ಷ ನಾಡು ಹಾಗೂ ಸಂಘಟನಾ ಶಕ್ತಿ ಪತ್ರಿಕೆ ಸಂಪಾದಕರಾದ ಹುಲ್ಲಂಬಿ ಗ್ರಾಮದ ಸುಭಾಸ ಸುಣಗಾರ ಅವಿರೋಧ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಪಬ್ಲಿಕ್ ನೆಕ್ಸ್ಟ್ ವರದಿಗಾರರಾದ ಕಲಘಟಗಿ ಪಟ್ಟಣದ ಉದಯ ಗೌಡರ ಹಾಗೂ ಉಪ್ಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆ ವರದಿಗಾರರಾದ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಕಲ್ಲಪ್ಪ ಮಿರ್ಜಿ ಆಯ್ಕೆಯಾಗಿದ್ದಾರೆ.

ಮಲ್ಲಿಕಾರ್ಜುನ ಪುರದನಗೌಡರ, ರವಿ ಬಡಿಗೇರ, ಪ್ರಭು ರಂಗಾಪುರ, ರಮೇಶ ಸೋಲಾರಗೊಪ್ಪ, ಉಮ್ಮೆಶ ಜೋಶಿ, ವಿನಾಯಕ ಭಟ್ಟ, ಪ್ರಕಾಶ ಲಮಾಣಿ, ಶಶಿಕುಮಾರ ಕಟ್ಟಿಮನಿ, ನಿತೀಶ ತಡಸ, ಕಲ್ಲಪ್ಪ ಹುದ್ದಾರ, ಇದ್ದರು.

Edited By : Abhishek Kamoji
Kshetra Samachara

Kshetra Samachara

11/08/2022 12:19 pm

Cinque Terre

7.74 K

Cinque Terre

0

ಸಂಬಂಧಿತ ಸುದ್ದಿ