ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸದಸ್ಯೆರ ಬದಲು ಅವರ ಗಂಡಂದಿರು ಆಡಳಿತ ಮಾಡುತ್ತಿದ್ದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಈ ವರದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನೆ ಕೇಳಿದ ನಂತರ, ಮಹಿಳೆಯರ ಆಡಳಿತದಲ್ಲಿ ಇನ್ನಷ್ಟು ಲೀಡರ್‌ಶಿಪ್ ಬೆಳಿಸಬೇಕಾಗಿದೆ. ಇನ್ಮುಂದೆ ಯಾರು ಕೂಡ ಮಹಿಳೆಯರ ಅಧಿಕಾರದಲ್ಲಿ ಗಂಡಂದಿರು ಪಾಲ್ಗೊಳ್ಳದಂತೆ ನಿರ್ಬಂಧ ಹಾಕಲಾಗುತ್ತದೆಂದು ಮಾಜಿ ಸಿಎಂ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಇಂಡಿಪೆಂಡೆಂಟ್ ಆಗಿ ನಾಯಕತ್ವ ಬೆಳೆಸುವಂತಾದ್ರೆ, ಅವರ ಆಡಳಿತದಲ್ಲಿ ಗಂಡಂದಿರು, ಅಣ್ಣತಮ್ಮಂದಿರು ಯಾರು ಭಾಗವಹಿಸುವುದಿಲ್ಲಾ. ಮಹಿಳೆಯರ ಆಡಳಿತದಲ್ಲಿ ಪುರುಷ ಸಂಬಂಧಿಕರು ತಲೆ ಹಾಕುವುದಕ್ಕೆ ನಿರ್ಬಂಧ ಹೇರಲು ಮುಂದಾಗುತ್ತದೆ ಎಂದರು.
ನಾನು ಆರ್‌ಡಿಪಿಐ ಮಿನಿಸ್ಟರ್ ಇದ್ದಾಗ ಗುಲ್ಬರ್ಗಕ್ಕೆ ಹೋಗಿದ್ದೆ. ಅಲ್ಲಿದ್ದ ಮಹಿಳಾ ಸೀಟ್ ಆರಿಸಿ ಬಂದವರು. ನಂಗೆ ಮನವಿ ಪತ್ರ ನೀಡಿದ್ದರು. ನಮ್ಮ ಗಂಡಂದಿರನ್ನು ಒಳಗೆ ಬಿಡಿ ನಮ್ಮ ಪರವಾಗಿ ಮೀಟಿಂಗ್ ದಲ್ಲಿ ಚರ್ಚೆ ಮಾಡುತ್ತಾರೆಂದು. ಇದ ರೀತಿ ಮುಂದ ವರಿಸಿದ್ರ ನಿಮ್ಮನ್ನ ಡಿಸ್ಕ್ವಾಲಿಪಾಯ್ ಮಾಡ್ತೆನೆಂದು ಎಚ್ಚರಿಕೆ ಕೊಟ್ಟಿದ್ದೆ. ಇದು ಅನಾದಿಕಾಲದಿಂದಲೂ ಬಂದಂತಹದ್ದೆ ಎಂದರು.
Kshetra Samachara
11/08/2022 12:18 pm