ಧಾರವಾಡ: ನಾನು ಯಾವುದೇ ಶಿವಕುಮಾರ ಉತ್ಸವ, ಸಿದ್ದರಾಮೋತ್ಸವ ಮಾಡಲು ಹೋಗಿರಲಿಲ್ಲ. ಗ್ಲೋಬಲ್ ಸಮಿತಿ ಸಭೆಗೆ ಹೋಗಿದ್ದೆ. ಅಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ಮಾಡಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೃಷಿ ಸಚಿವರು ಕಾಣೆಯಾಗಿದ್ದಾರೆ ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ, ಆರ್ಗ್ಯಾನಿಕ್ ಬಯೋಫ್ಯಾಕ್ಟ್ ನಲ್ಲಿ ಗ್ಲೋಬಲ್ ಸಮಿತಿ ಸಭೆಗೆ ನಾನು ಹೋಗಿದ್ದೆ. ಸಭೆಗೆ ಹೋಗಿದ್ದರೂ ಅಧಿಕಾರಿಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೆ. ಕಾಂಗ್ರೆಸ್‌ನವರಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದರು.
ಕಾಂಗ್ರೆಸ್‌ನವರ ಹಾಗೆ ಉತ್ಸವ ಮಾಡಿಕೊಳ್ಳುತ್ತ ಹೋದರೆ ಜನ ಮೆಚ್ಚುವುದಿಲ್ಲ. ನಾವು ಜನಪರ ಕೆಲಸಗಳನ್ನು ಮಾಡಿ ಜನರ ಬಳಿ ಹೋಗುತ್ತೇವೆ. ಕಾಂಗ್ರೆಸ್‌ನವರ ಹಾಗೆ ಉತ್ಸವಗಳನ್ನು ನಾವು ಮಾಡುವುದಿಲ್ಲ ಎಂದರು.
Kshetra Samachara
09/08/2022 05:10 pm