ಕಲಘಟಗಿ: ಕಳೆದ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಎರಡು ಕಿಲೋಮೀಟರ್ ಉದ್ದ ಹಾಗೂ ಒಂಭತ್ತು ಅಡಿ ಅಗಲದ ರಾಷ್ಟ್ರಧ್ವಜದ ಮೆರವಣಿಗೆ ಮಾಡಿದ್ದ ಮಾಜಿ ಸಚಿವ ಸಂತೋಷ ಲಾಡ್ ರವರು ಈ ಬಾರಿ 9 ಕಿ.ಮೀಟರ್ ಉದ್ದದ ಧ್ವಜ ಮೆರವಣಿಗೆ ಮಾಡುವ ಮೂಲಕ ತಮ್ಮದೆ ದಾಖಲೆ ಮುರಿಯಲಿದ್ದಾರೆ
ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸ್ಮರಣೀಯವಾಗಿ ಮಾಡಲು ಹೊರಟಿದ್ದಾರೆ ಲಾಡ್.
ಅದೇನು ಅಂದರೆ ಸುಮಾರು ಒಂಬತ್ತು ಕಿಲೋಮೀಟರ್ ಉದ್ದದ ರಾಷ್ಟ್ರದ್ವಜ ಮೆರವಣಿಗೆ ಮಾಡಲು ತಯಾರಿ ನಡೆಸಿದ್ದಾರೆ. ಈ ಒಂದು ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಸೇರುವ ಸಂಭವವಿದ್ದು ಎಲ್ಲರಿಗೂ ಊಟದ ವೆವಸ್ಥೆ ಕೂಡ ಮಾಡಲಾಗಿದೆ ಎಂದು ಸ್ವತಃ ಸಂತೋಷ ಲಾಡ್ ರವರು ತಿಳಿಸಿದ್ದಾರೆ.
ಈ ರಾಷ್ಟ್ರಧ್ವಜದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಸಹಸ್ರಾರು ಅಭಿಮಾನಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಏನೆ ಆಗಲಿ ಇಂತಹ ರಾಷ್ಟ್ರ ಪ್ರೇಮವನ್ನು ಕಣ್ಣಾರೆ ನೋಡಲು ತಾಲೂಕಿನ ಜನತೆ ಹಾತೊರೆಯುತ್ತಿರುವುದಂತು ಸತ್ಯ.
Kshetra Samachara
08/08/2022 06:26 pm