ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕಾಂಗ್ರೆಸ್ ಕಾರ್ಯಕರ್ತರ ದಿಕ್ಕು ತಪ್ಪಿಸುತ್ತಿರುವ ಈ ಇಬ್ಬರು ನಾಯಕರು

ಕಲಘಟಗಿ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆದು ಹೋಗಿರುವ ಪರಿಸ್ಥಿತಿ ತಾಲೂಕಿನ ಜನರಿಗೆ ಗೊತ್ತಿರುವ ವಿಷಯ ಯಾಕೆಂದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಇಬ್ಬರು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ.

ಆದರೆ ಇವರಿಬ್ಬರು ಕ್ಷೇತ್ರದ ಕಾರ್ಯಕರ್ತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದದೆ. ಕಾರಣ ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಈ ಇಬ್ಬರು ಇದುವರೆಗೂ ಕಲಘಟಗಿ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ.

ಆದರೆ ಇತ್ತಿಚೆಗೆ ನಡೆದ ಧಾರವಾಡದ ನವಲೂರಿನ ನವಸಂಕಲ್ಪ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಅಕ್ಕ ಪಕ್ಕ ಸ್ನೇಹಿತರಾಗಿ ನಿಂತಿದ್ದಾರೆ. ನಂತರ ಒಟ್ಟಿಗೆ ಊಟ ಕೂಡ ಮಾಡಿದ್ದಾರೆ. ಇದೆಲ್ಲ ನೋಡಿದರೆ ಇವರು ಕಲಘಟಗಿ ತಾಲೂಕಿನಲ್ಲಿ ಇದುವರೆಗೂ ಕಾಂಗ್ರೆಸ್ ಪಕ್ಷದ ಯಾವುದೆ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದ ಇವರು ಹೋರ ತಾಲೂಕಿನಲ್ಲಿ ಈ ರೀತಿ ಕಾಣಿಸಿಕೊಂಡಿರುವ ಇಬ್ಬರು ತಾಲೂಕಿನ ಕಾರ್ಯಕರ್ತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಎನೇ ಆಗಲಿ ನಮ್ಮ ನಾಯಕರು ನಮ್ಮ ನಾಯಕರು ಎಂದು ಎರಡು ಬಣ ಮಾಡಿಕೊಂಡಿರುವ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಇದನ್ನ ಅರ್ಥ ಮಾಡಿಕೊಳ್ಳಬೇಕಾಗಿದೆ.

ವರದಿ: ಉದಯ ಗೌಡರ

Edited By : Nirmala Aralikatti
Kshetra Samachara

Kshetra Samachara

05/08/2022 08:13 pm

Cinque Terre

13.09 K

Cinque Terre

3

ಸಂಬಂಧಿತ ಸುದ್ದಿ