ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: "ಅನುದಾನ ಹಂಚಿಕೆಯಲ್ಲಿ ಮೇಯರ್ ತಾರತಮ್ಯ" ; ಅಬ್ಬರಿಸಿದ ಶಾಸಕ ಅಬ್ಬಯ್ಯ

ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಬಿಜೆಪಿ ಸದಸ್ಯರಿಗೆ ಬೇರೆ, ಕಾಂಗ್ರೆಸ್ ಸದಸ್ಯರಿಗೆ ಬೇರೆ ಅನುದಾನ ನೀಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು, ಶಾಸಕ ಪ್ರಸಾದ್ ಅಬ್ಬಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮೇಯರ್ ಈರೇಶ ಅಂಚಟಗೇರಿ, ತಮಗೆ ಒಂದು ಕೋಟಿ, ಉಪಮೇಯರ್ ಅವರಿಗೆ 50 ಲಕ್ಷ, ಪಾಲಿಕೆಯ ಬಿಜೆಪಿ ಸದಸ್ಯರಿಗೆ 50 ಲಕ್ಷ ಅನುದಾನ ನೀಡುತ್ತಿದ್ದಾರೆ. ಕಾಂಗ್ರೆಸ್ ಸದಸ್ಯರಿಗೆ 10ರಿಂದ 12 ಲಕ್ಷ ಮಾತ್ರ ಅನುದಾನ ನೀಡುತ್ತಿದ್ದಾರೆ. ಈ ತಾರತಮ್ಯ ನೀತಿಯನ್ನು ಮೇಯರ್ ಕೈಬಿಡಬೇಕು. ಮೇಯರ್ ತಾವು ಮಾಡಿದ್ದೇ ರಾಜ್ಯಭಾರ ಎನ್ನುವಂತಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಶಾಸಕ ಅಬ್ಬಯ್ಯ ಎಚ್ಚರಿಸಿದರು.

ಇನ್ನು, ಪಾಲಿಕೆಯ ಕೆಲ ಕಾಂಗ್ರೆಸ್ ಸದಸ್ಯರ ಜಾತಿ ಪ್ರಮಾಣ ಪತ್ರ ಸರಿಯಿಲ್ಲ ಎಂದು ಬಿಜೆಪಿಯ ಸೋತ ಅಭ್ಯರ್ಥಿಗಳು ಆರೋಪ ಮಾಡುತ್ತಿದ್ದಾರೆ. ಜಾತಿ ಪ್ರಮಾಣಪತ್ರಗಳು ಸರಿ ಇವೆ ಎಂದು ಎ.ಸಿ. ಅವರೇ ಹೇಳಿದ್ದಾರೆ. ಬಿಜೆಪಿಯವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

Edited By : Shivu K
Kshetra Samachara

Kshetra Samachara

05/08/2022 08:07 pm

Cinque Terre

53.53 K

Cinque Terre

1

ಸಂಬಂಧಿತ ಸುದ್ದಿ