ಹುಬ್ಬಳ್ಳಿ: ಕೇಂದ್ರ ಸರ್ಕಾರ ರಾಷ್ಟ್ರೀಯ ಧ್ವಜ ತಯಾರಿಕೆ ಹಾಗೂ ರಾಷ್ಟ್ರೀಯ ಧ್ವಜದಲ್ಲಿ ಹೊಸ ನೀತಿಯನ್ನು ಜಾರಿ ಮಾಡಿದೆ. ಈ ಕಾರಣದಿಂದ ಖಾದಿ ಗ್ರಾಮೋದ್ಯೋಗ ಹಾಗೂ ಧ್ವಜ ತಯಾರಿಕೆ ಘಟಕ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ವಿರೋಧಿಸಿ ಪ್ರತಿಭಟನೆಗೆ ಕುಳಿತಿರುವ ಗಾಂಧಿ ಧ್ವಜ ತಯಾರಿಕೆ ಕಾರ್ಮಿಕರನ್ನು ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ನಂತರ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿದ ರಾಹುಲ್ ಧ್ವಜ ತಯಾರಿಕೆಯನ್ನು ವೀಕ್ಷಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/08/2022 09:41 pm