ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮುಂಬಡ್ತಿ ಆದೇಶ ರದ್ದು: ಸಿಬ್ಬಂದಿ ಪರ ಪ್ರತಿಭಟನೆಗಿಳಿದ ದಲಿತ ಸಂಘಟನೆ

ಧಾರವಾಡ: ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ ಎಸ್ಸಿ, ಎಸ್ಟಿ ಸಮುದಾಯದ ನೌಕರರಿಗೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿ ಇದೀಗ ಸಂಘಟನೆಯೊಂದು ಒತ್ತಾಯಿಸಿದೆ.

ಈ ಹಿಂದೇ ತಮಗೆ ಮುಂಬಡ್ತಿ ಆದೇಶ ರದ್ದುಪಡಿಸಿ, ಕೇವಲ ಎಸ್ಸಿ, ಎಸ್ಟಿ ಸಮುದಾಯದ ನೌಕರರಿಗೆ ಮಾತ್ರ ಮುಂಬಡ್ತಿ ನೀಡಲಾಗಿದೆ. ಅಲ್ಲದೇ ಹಣ ಕೊಟ್ಟರೂ ಮುಂಬಡ್ತಿ ಆದೇಶ ನೀಡಿಲ್ಲ ಎಂದು ಆರೋಪಿಸಿ ಇತರ ಅರಣ್ಯ ರಕ್ಷಕರು ಪ್ರತಿಭಟನೆ ನಡೆಸಿದ್ದರು. ಅಂದು ನಡೆಸಿದ ಪ್ರತಿಭಟನೆ ವಿರುದ್ಧ ಇದೀಗ ಎಸ್ಸಿ ಹಾಗೂ ಎಸ್ಟಿ ಸಮುದಾಯದ ನೌಕರರ ಪರ ದಲಿತ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಧಾರವಾಡ ವಲಯ ಅರಣ್ಯ ಇಲಾಖೆ ಎದುರು ಜಮಾಯಿಸಿದ ದಲಿತ ಸಂಘಟನೆ ಕಾರ್ಯಕರ್ತರು, ನಮ್ಮ ಸಮುದಾಯದ ನೌಕರರಿಗೆ ಮುಂಬಡ್ತಿ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಬೇಕಂತಲೇ ಮುಂಬಡ್ತಿ ಆದೇಶ ರದ್ದು ಮಾಡಿ ದಲಿತ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ ದಲಿತ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದರು.

ಒಟ್ಟಾರೆ ಈ ಮುಂಬಡ್ತಿ ಆದೇಶದಲ್ಲಾಗಿರುವ ತಾರತಮ್ಯದಿಂದಾಗಿ ಇದೀಗ ಸಂಘಟನೆಯೊಂದು ಮಧ್ಯೆ ಪ್ರವೇಶ ಮಾಡುವಂತಾಗಿದೆ.

Edited By : Manjunath H D
Kshetra Samachara

Kshetra Samachara

03/08/2022 03:49 pm

Cinque Terre

15.11 K

Cinque Terre

0

ಸಂಬಂಧಿತ ಸುದ್ದಿ