ಹುಬ್ಬಳ್ಳಿ: ವಾಣಿಜ್ಯನಗರಿಗೆ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಸ್ವಾಗತಕ್ಕೆ ಕಾರ್ಯಕರ್ತ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದ ಮುಂದೆ ವಾದ್ಯಗಳ ಮೂಲಕ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಜಗ್ಗಲಗಿ ಮೇಳ, ಡೊಳ್ಳಿನ ಕುಣಿತದ ಮೂಲಕ ರಾಹುಲ್ ಗಾಂಧಿ ಸ್ವಾಗತಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದು, ಗೋಕುಲ ರೋಡ್ ಸಂಪೂರ್ಣ ಟ್ರಾಫಿಕ್ ಆಗಿದೆ.
ಈಗಾಗಲೇ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ತಮ್ಮ ಬೆಂಬಲಿಗರ ಜೊತೆಗೆ ವಿಮಾನ ನಿಲ್ದಾಣದ ಮುಂದೆ ಜಮಾವಣೆಗೊಳ್ಳುತ್ತಿದ್ದು ಸಾರ್ವಜನಿಕರ ವಾಹನಗಳು ಪರದಾಡುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/08/2022 07:25 pm