ಹುಬ್ಬಳ್ಳಿ: ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ಆತಂಕದ ವಿಷಯ. ಈ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ದೇಶಾದ್ಯಂತ ಸಾಕಷ್ಟು ಜನರು ದುಡಿಯುತ್ತಿದ್ದಾರೆ. ಆದರೆ, ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಖಾದಿ ತಿದ್ದುಪಡಿ ಜಾರಿಗೆ ತರುವ ಮೂಲಕ ಖಾದಿ ಕೈ ಬಿಡುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವೆ ಉಮಾಶ್ರೀ ಬೇಸರ ವ್ಯಕ್ತಪಡಿಸಿದರು.
ನಗರದ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಮಾತನಾಡಿದ ಅವರು, ರಾಷ್ಟ್ರ ಧ್ವಜ ನಿರ್ಮಾಣ ಮಾಡಲು ಶ್ರೇಷ್ಠ ಚರಿತ್ರೆ ಇದ್ದು, ಅವಿನಾಭಾವ ಸಂಬಂಧ ಇದರಲ್ಲಿ ಅಡಗಿದೆ. ಧ್ವಜ ನೀತಿ ಸಂಹಿತೆ ಪ್ರಕಾರ ಧ್ವಜ ತಯಾರು ಮಾಡುತ್ತಿದೆ.
ದೇಶದ ಸಮಗ್ರವಾದ ಸಂಸ್ಕೃತಿ ತ್ರಿವರ್ಣ ಧ್ವಜ ಪ್ರತಿನಿಧಿಸುತ್ತಿದ್ದು, ಅಂತಹ ಧ್ವಜವನ್ನು ಪ್ರತಿಯೊಬ್ಬರೂ ಹೃದಯದಲ್ಲಿಟ್ಟುಕೊಂಡು ಗೌರವಿಸುತ್ತಾರೆ. ಆದರೆ, ಸರ್ಕಾರ ಚೀನಾದಿಂದ ಪಾಲಿಸ್ಟರ್ ಧ್ವಜವನ್ನು ಆಮದು ಮಾಡಿಕೊಳ್ಳಲಿಕ್ಕೆ ಮುಂದಾಗಿರುವುದು ಸಮಂಜಸವಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/07/2022 01:34 pm