ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಯಕರ್ತರು ಒಂದಿಲ್ಲೊಂದು ರೀತಿಯಲ್ಲಿ ಏನಾದರೂ ಒಂದನ್ನು ಮಾಡಿ ಸುದ್ಧಿ ಆಗುತ್ತಲೇ ಇರುತ್ತಾರೆ. ಅಂತಹುದೇ ಒಂದು ಘಟನೆ ಹುಬ್ಬಳ್ಳಿಯಲ್ಲಿಂದು ಬೃಹತ್ ಪ್ರತಿಭಟನೆಯಲ್ಲಿ ನಡೆದಿದೆ.
ಹೌದು.ಸೋನಿಯಾ ಗಾಂಧಿ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಸಾಕಷ್ಟು ಪ್ಲೆಕ್ಸ್ ಬ್ಯಾನರ್ ಮಾಡಿಸಿ ಪ್ರದರ್ಶನ ಮಾಡುತ್ತಿದೆ. ಆದರೆ ಕಾರ್ಯಕರ್ತರು ಬ್ಯಾನರ್ ಪ್ರದರ್ಶನಕ್ಕೆ ಬಳಸದೇ ಮಳೆಯ ಹನಿಯಿಂದ ಪಾರಾಗಲು ಹೊತ್ತುಕೊಂಡು ನಿಂತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿತ್ತು.
ಇನ್ನೂ ಕಾರ್ಯಕರ್ತನೊಬ್ಬ ಬಾವುಟವನ್ನು ತಲೆಗೆ ಹೊತ್ತುಕೊಂಡು ನಿಲ್ಲುವ ಮೂಲಕ ಪ್ರತಿಭಟನೆಯ ಘನತೆಗೆ ಧಕ್ಕೆ ಉಂಟು ಮಾಡಿದ್ದಂತೂ ಸತ್ಯ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಎಲ್ಲೊ ಒಂದು ಕಡೆಯಲ್ಲಿ ಸಾಮಾನ್ಯ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ ಎಂಬುವುದು ಸಾರ್ವಜನಿಕರ ಮಾತು.
Kshetra Samachara
22/07/2022 04:27 pm