ನವಲಗುಂದ: ರೈತ ಮುಖಂಡರ ಸ್ಮರಣೆಗಾಗಿ ನವಲಗುಂದ ಪಟ್ಟಣಕ್ಕೆ ಆಗಮಿಸಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಹೆಚ್ ನೀರಲಕೇರಿ ಆಗಮಿಸಿ, ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರವೇ ಹುತಾತ್ಮ ದಿನಾಚರಣೆಯನ್ನು ಆಚರಿಸಬೇಕಿತ್ತು. ಯಾಕೋ ಈ ಬಗ್ಗೆ ಸರ್ಕಾರ ಲಕ್ಷ ವಹಿಸಿಲ್ಲ. ಮುಂದಿನ ದಿನಗಳಲ್ಲಿ ರೈತರು ಇದನ್ನ ಹಗುರವಾಗಿ ಭಾವಿಸುವುದಿಲ್ಲ. ಮೋದಿ ಹಾಗೂ ಬೊಮ್ಮಾಯಿ ಸರ್ಕಾರದ ವಿರುದ್ಧ ರೈತ ಪರ ಹೋರಾಟಗಾರರು ಹೊರಾಟ ಮಾಡ್ತಾರೆ. ಧಾರವಾಡ ಜಿಲ್ಲೆಗೆ ಉಸ್ತುವಾರಿ ಸಚಿವರೇ ಇಲ್ಲಾ, ಇದ್ದಂತ ಸಚಿವರು ಜಗದೀಶ್ ಶೆಟ್ಟರ್ ಮನೆ ಕಾಯ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
Kshetra Samachara
21/07/2022 10:00 pm