ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇಡೀ ದೇಶದಲ್ಲೇ ಮದರಸಾಗಳನ್ನು ಬ್ಯಾನ್ ಮಾಡಿ; ಮುತಾಲಿಕ್ ಆಗ್ರಹ

ಧಾರವಾಡ: ಮುಸ್ಲಿಂ ಮದರಸಾಗಳು ಭಯೋತ್ಪಾದಕರನ್ನು ಹುಟ್ಟು ಹಾಕುವ ಕೇಂದ್ರಗಳಾಗಿದ್ದು, ಇಡೀ ದೇಶದಲ್ಲೇ ಅವುಗಳನ್ನು ಬಂದ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಇಂದು ಮದರಸಾಗಳಲ್ಲಿ ಬೋಧಿಸಲಾಗುತ್ತಿರುವ ಪಾಠಗಳು ಸಮಾಜದಲ್ಲಿ ಪರಿಣಾಮ ಬೀರುತ್ತಿವೆ. ಈ ಮದರಸಾಗಳು ಬಹಳ ಅಪಾಯಕಾರಿಯಾಗಿವೆ. ಉತ್ತರ ಪ್ರದೇಶದಲ್ಲಿ ಕಾನೂನು ಬಾಹಿರವಾಗಿದ್ದ 300 ಮದರಸಾಗಳನ್ನು ಬಂದ್ ಮಾಡಲಾಗಿದೆ. ಅಸ್ಸಾಂನಲ್ಲೂ ಸಾವಿರಾರು ಮದರಸಾಗಳನ್ನು ನಿಲ್ಲಿಸಿದ್ದಾರೆ. ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲೂ ಮದರಸಾಗಳನ್ನು ಬ್ಯಾನ್ ಮಾಡಿದ್ದಾರೆ. ಹೀಗಾಗಿ ನಮ್ಮ ದೇಶದಲ್ಲೂ ಕೇಂದ್ರ ಸರ್ಕಾರ ಇವುಗಳನ್ನು ಬ್ಯಾನ್ ಮಾಡಿ ಉರ್ದು ಶಾಲೆಗಳನ್ನು ಹೆಚ್ಚಿಗೆ ತೆರೆಯಲಿ ಎಂದು ಆಗ್ರಹಿಸಿದ್ದಾರೆ.

ಉರ್ದು ಶಾಲೆಗಳ ಮುಖಾಂತರ ಅವರು ನಮ್ಮ ದೇಶದ ಪಠ್ಯ, ಪುಸ್ತಕಗಳನ್ನು ಅಧ್ಯಯನ ಮಾಡಲಿ, ಕಂಪ್ಯೂಟರ್ ಕಲಿಯಲಿ, ಗಣಿತ, ವಿಜ್ಞಾನ ವಿಷಯವನ್ನು ಕಲಿಯಲಿ ನಮ್ಮದೇನೂ ತಕರಾರಿಲ್ಲ ಎಂದಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್ ಕನ್ಹಯ್ಯ ಲಾಲ್ ಹತ್ಯೆ ಮಾಡಿದವರಲ್ಲಿ ಒಬ್ಬ ಮಸೀದಿಯಲ್ಲಿ ಕೆಲಸ ಮಾಡುತ್ತಾನೆ. ಮಸೀದಿ ಎಂದರೆ ಅದು ಪ್ರಾರ್ಥನಾ ಸ್ಥಳ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವ ಸ್ಥಳ. ಪೈಗಂಬರರ ಸಲುವಾಗಿ ಈ ಕೊಲೆ ಮಾಡುತ್ತಿದ್ದೇನೆ ಎಂದು ಹೇಳಿ ಈ ಕೊಲೆ ಮಾಡಿದ್ದಾನೆ. ಇದನ್ನು ನೋಡಿದರೆ ಎಲ್ಲೋ ಒಂದು ಕಡೆ ಬೋಧನೆ ವಿಕೃತಿಗೆ ಹೋಗುತ್ತಿದೆ ಎಂಬುದು ಗೊತ್ತಾಗುತ್ತದೆ. ಇದೇನು ಮೊದಲನೆಯದ್ದಲ್ಲ, ಹಿಂದೆಯೂ ಸಾಕಷ್ಟು ಬಾರಿ ಆಗಿವೆ. ಮುಂದೆಯೂ ಆಗಬಹುದು. ಇದರ ಮೂಲಗಳೇ ಮದರಸಾಗಳು ಎಂದಿದ್ದಾರೆ.

ಉತ್ತರ ಪ್ರದೇಶದ ಸಿಯಾ ಮುಸ್ಲಿಂ ವಕ್ಫ ಬೋರ್ಡ್ ಮುಖ್ಯಸ್ಥ ಖುರಾನ್‌ನಲ್ಲಿರುವ 26 ಐಯಾತ್‌ಗಳು ಕ್ರೌರ್ಯಕ್ಕೆ ತೆಗೆದುಕೊಂಡು ಹೋಗುತ್ತಿವೆ, ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಅವುಗಳನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೆ, ಅಲ್ಲಿನ ಹೈಕೋರ್ಟ್ ಅರ್ಜಿ ರದ್ದುಗೊಳಿಸಿ ವಾಪಸ್ ಕಳುಹಿಸಿದೆ. ಒಬ್ಬ ಮುಸ್ಲಿಂ ಮುಖ್ಯಸ್ಥ ಅದನ್ನು ಹೇಳಬೇಕು ಎಂದರೆ ಮದರಸಾಗಳಲ್ಲಿ ಸಿಗುವಂತಹ ಬೋಧನೆ ಎಂತದ್ದು ಎಂದು ನಾವು ವಿಚಾರ ಮಾಡಬೇಕು ಎಂದರು.

ಮದರಸಾಗಳಲ್ಲಿ ಖುರಾನ್‌ನ್ನೇ ಬೋಧಿಸುತ್ತಾರೆ. ಯಾರು ಅಲ್ಲಾಹುನನ್ನು ಸ್ವೀಕಾರ ಮಾಡುವುದಿಲ್ಲವೋ ಅವರನ್ನು ಕೊಂದು ಹಾಕಬೇಕು ಎಂಬುದನ್ನು ಅಲ್ಲಿ ಕಲಿಸಿಕೊಡುತ್ತಿದ್ದಾರೆ. ಇವತ್ತು ಕನ್ಹಯ್ಯ ಕೊಲೆ ಮಸೀದಿ ಮೌಲ್ವಿಯ ಬೋಧನೆ ಹಿನ್ನೆಲೆಯಲ್ಲೆ ನಡೆದಿದೆ ಎಂದು ಆರೋಪಿಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/06/2022 09:50 pm

Cinque Terre

77.58 K

Cinque Terre

40

ಸಂಬಂಧಿತ ಸುದ್ದಿ