ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಗ್ರಾಮೀಣದಲ್ಲಿ ಯೂಥ್ ಐಕಾನ್ ಆದ ಇಸ್ಮಾಯಿಲ್ ತಮಟಗಾರ

ಇಸ್ಮಾಯಿಲ್ ತಮಟಗಾರ. ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ. ಯುವ ಉತ್ಸಾಹಿ ನಾಯಕರಾಗಿರುವ ಇಸ್ಮಾಯಿಲ್ ತಮಟಗಾರ ಮಂಗಳವಾರ ತಮ್ಮ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ ಧಾರವಾಡ ಸೇರಿದಂತೆ ಧಾರವಾಡ ಗ್ರಾಮೀಣ ಕ್ಷೇತ್ರದ ವಿವಿಧ ಊರುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಮ್ಮ20 ವರ್ಷದ ರಾಜಕೀಯ ಜೀವನದಲ್ಲಿ ಹಲವಾರು ಏಳು, ಬೀಳುಗಳನ್ನು ಕಂಡಿರುವ ಇಸ್ಮಾಯಿಲ್ ಅವರದ್ದು ಸಮಸ್ಯೆಗಳಿಗೆ ಜಗ್ಗದ ವ್ಯಕ್ತಿತ್ವ. ಬಡವರ ಸೇವೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು, ಸಮಸ್ಯೆ ಎಂದು ಮನೆಗೆ ಬಂದವರಿಗೆ ಕೈಲಾದ ಸಹಾಯ ಮಾಡುವ ಗುಣ ಇಸ್ಮಾಯಿಲ್ ಅವರದ್ದು. ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ಸಮಾಜದಲ್ಲಿ ತಮ್ಮದೇ ಆದ ಛಾಪನ್ನು ಇವರು ಮೂಡಿಸಿದ್ದಾರೆ. ಅನೇಕ ಯುವಪಡೆಯನ್ನು ಹೊಂದಿ ಯೂಥ್ ಐಕಾನ್ ಆಗಿದ್ದಾರೆ. ಅವರು ಇಂದು ತಮ್ಮ 44 ನೇ ಹುಟ್ಟು ಹಬ್ಬವನ್ನು ಬುದ್ಧಿಮಾಂದ್ಯ ಮಕ್ಕಳು, ಯುವಕರು, ವೃದ್ಧರು ಹಾಗೂ ಬಡವರ ಮಧ್ಯೆ ಆಚರಿಸಿಕೊಳ್ಳುವ ಮೂಲಕ ಮಾದರಿ ಎನಿಸಿದ್ದಾರೆ.

ಧಾರವಾಡದ ಮಿಚಿಗನ್ ಕಂಪೌಂಡ್ ಬಳಿ ಇರುವ ಅವರ ಮನೆಗೆ ಬಂದ ಅಭಿಮಾನಿಗಳು, ಇಸ್ಮಾಯಿಲ್ ಅವರ ಕಡೆಯಿಂದ ಕೇಕ್ ಕಟ್ ಮಾಡಿಸಿ ಜನ್ಮದಿನದ ಶುಭಾಶಯ ಕೋರಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಿ ಶಿಕ್ಷಣ ಪ್ರೇಮಿ ಎನಿಸಿಕೊಂಡ ಇಸ್ಮಾಯಿಲ್, ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ಬಡವರ ಬೆನ್ನಿಗೆ ನಿಂತವರು. ಅವರ ಜನ್ಮ ದಿನವನ್ನು ಇಂದು ಅವರು ವಿಶಿಷ್ಠವಾಗಿ ಆಚರಿಸಿಕೊಳ್ಳುವ ಮೂಲಕ ಮಾದರಿ ಯುವ ನಾಯಕ ಎನಿಸಿಕೊಂಡಿದ್ದಾರೆ. ಧಾರವಾಡದ ಹೊನ್ನಮ್ಮ ಕಿವುಡ ಮಕ್ಕಳ ಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿ ಬುದ್ಧಿಮಾಂದ್ಯ ಮಕ್ಕಳ ಮಧ್ಯೆ ಕುಳಿತು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಅಲ್ಲಿಂದ ಮುರುಘಾಮಠಕ್ಕೆ ತೆರಳಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದುಕೊಂಡರು. ಬಾರಾ ಇಮಾಮ್‌ ಗಲ್ಲಿಯಲ್ಲಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಾರಾ ಇಮಾಮ್ ಗಲ್ಲಿಯ ಐದು ನಂಬರ್ ಉರ್ದು ಶಾಲೆಗೆ ಭೇಟಿ ನೀಡಿ, ಶಾಲಾ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಣೆ ಮಾಡಿದರು. ನಂತರ ಅಂಜುಮನ್ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಹಮ್ಮಿಕೊಂಡಿದ್ದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಆತಿಥ್ಯ ಸ್ವೀಕರಿಸಿದರು.

ಇಸ್ಮಾಯಿಲ್ ಅವರ ಜನ್ಮ ದಿನದ ಅಂಗವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಹೆಬ್ಬಳ್ಳಿ, ತಡಕೋಡ ಸೇರಿದಂತೆ ಅನೇಕ ಕಡೆಗಳಲ್ಲಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ, ಇಸಿಜಿ, ನೇತ್ರ, ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಹಮ್ಮಿಕೊಂಡು ಇಸ್ಮಾಯಿಲ್ ಅವರ ಹುಟ್ಟುಹಬ್ಬವನ್ನು ಸಾರ್ಥಕತೆಗೊಳಿಸಿದರು.

ಹೆಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮಕ್ಕೂ ಮುನ್ನ ಇಸ್ಮಾಯಿಲ್ ಅವರಿಗಾಗಿಯೇ ಅವರ ಅಭಿಮಾನಿ ಈರಣ್ಣ ನಾಗಣ್ಣವರ ಕೇಕ್ ಒಂದನ್ನು ರೆಡಿ ಮಾಡಿಸಿದ್ದರು. ಅಭಿಮಾನಿ ಆಸೆಯಂತೆ ಅವರ ಮನೆಗೆ ತೆರಳಿದ ಇಸ್ಮಾಯಿಲ್, ಆ ಕುಟುಂಬಸ್ಥರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು. ಅಲ್ಲಿಂದ ಧಾರವಾಡ ತಾಲೂಕಿನ ತಡಕೋಡದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ಹಾಗೂ ಬ್ಯಾಗ್‌ಗಳನ್ನು ವಿತರಿಸಿದರು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ, ಕೋಟೂರು, ಸಿಂಗನಹಳ್ಳಿ, ಕರಡಿಗುಡ್ಡ, ಅಮ್ಮಿನಭಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಇಡೀ ದಿನ ಸಂಚರಿಸಿದ ಇಸ್ಮಾಯಿಲ್, ತಮ್ಮ ಅಭಿಮಾನಿಗಳೊಂದಿಗೆ ಬೆರೆತು ಹುಟ್ಟು ಹಬ್ಬ ಆಚರಿಸಿಕೊಂಡರು.

ಏನೇ ಆಗಲಿ ಸುಮಾರು 20 ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇಸ್ಮಾಯಿಲ್, ಬಡವರು, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಕೆಲಸಗಳು ಅಸಂಖ್ಯ. ಮುಂದಿನ ಅವರ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನ ಸುಖಕರವಾಗಿರಲಿ ಎಂದು ನಾವೂ ಹಾರೈಸೋಣ.

Edited By : Shivu K
Kshetra Samachara

Kshetra Samachara

29/06/2022 03:26 pm

Cinque Terre

26.19 K

Cinque Terre

4

ಸಂಬಂಧಿತ ಸುದ್ದಿ