ನವಲಗುಂದ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಎಂಟು ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನವಲಗುಂದ ತಾಲೂಕ ಹಾಗೂ ನಗರ ಘಟಕದ ವತಿಯಿಂದ ವಿಕಾಸ್ ತೀರ್ಥ ಬೈಕ್ ರ್ಯಾಲಿಯನ್ನು ನವಲಗುಂದ ಪಟ್ಟಣದ ಶ್ರೀ ಗಣಪತಿ ದೇವಸ್ಥಾನದಿಂದ ಹಮ್ಮಿಕೊಳ್ಳಲಾಗಿತ್ತು.
ಹೌದು ನವಲಗುಂದ ಪಟ್ಟಣದ ಶ್ರೀ ಗಣಪತಿ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬಸಾಪುರ, ಅಣ್ಣಿಗೇರಿ, ಕೊಂಡಿಕೊಪ್ಪ, ಸಾಸ್ವೆಹಳ್ಳಿ, ಹಳ್ಳಿಕೇರಿ, ಅಡ್ನೂರು, ಕಿತ್ತೂರು, ನಾವಳ್ಳಿ, ತುಪ್ಪದಕುರಹಟ್ಟಿಯಿಂದ ಶಲವಡಿವರೆಗೆ ತೆರಳಿ ವಿಕಾಸ್ ತೀರ್ಥ ಬೈಕ್ ರ್ಯಾಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಜಿಲ್ಲಾ ಉಪಾಧ್ಯಕ್ಷರಾದ ಸಿದ್ದನಗೌಡ ಪಾಟೀಲ, ಪುರಸಭೆ ಸದಸ್ಯರಾದ ಮಹಾಂತೇಶ ಕಲಾಲ, ಶರಣಪ್ಪ ಹಕ್ಕರಕಿ, I.D ಪ್ರಭುಗೌಡ್ರ, ಅಡಿವಪ್ಪ ಶಿರಸಂಗಿ, ಬಸವರಾಜ ಕಾತರಕಿ, ತಾಲೂಕ ಯುವ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ಮೋರ್ಚಾ ನಗರ ಘಟಕದ ಅಧ್ಯಕ್ಷರಾದ ವಿನಾಯಕ ದಾಡಿಬಾಯಿ, ಪಕ್ಷದ ಹಿರಿಯರಾದ ರಾಯನಗೌಡ ಪಾಟೀಲ, ಬಾಬಣ್ಣ ಹುರಕಡ್ಲಿ ಸಿದ್ಧಪ್ಪ ಜನ್ನರ ಮತ್ತು ನಾಗೇಶ ಬೆಂಡಿಗೇರಿ, ಸಂತೋಷ ನಾವಳ್ಳಿ ತಾಲೂಕ ಹಾಗೂ ನಗರ ಘಟಕದ ಪಧಾದಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/06/2022 08:30 pm