ಧಾರವಾಡ: ನಾನು ನನ್ನ ಮಗಳ ಶಿಕ್ಷಣದ ಸಲುವಾಗಿ ಅಮೇರಿಕಾಕ್ಕೆ ಹೋಗಿದ್ದೆ. ಈಗ ವಾಪಸ್ ಬಂದಿದ್ದು, ಕ್ಷೇತ್ರದ ಅಭಿವೃದ್ಧಿ ಕೆಲಸದತ್ತ ಗಮನಹರಿಸುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಲ್ಲದ್, ನಾನು ನನ್ನ ಮಗಳ ಗ್ರ್ಯಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಐದು ವರ್ಷದಿಂದ ನನ್ನ ಮಗಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಅವಳ ಕಾಲೇಜ್ ಪ್ರವೇಶದ ಸಂದರ್ಭದಲ್ಲೂ ನಾನು ಹೋಗಿರಲಿಲ್ಲ. ಅವಳ ಕಾಲೇಜ್ ಕೂಡ ನೋಡಿರಲಿಲ್ಲ. ಹೀಗಾಗಿ ಆರು ದಿನ ನಮ್ಮ ನಾಯಕರ ಗಮನಕ್ಕೆ ತಂದು ನಾನು ಅಮೇರಿಕಾಕ್ಕೆ ಹೋಗಿದ್ದೆ. ಇನ್ನುಮುಂದೆ ನನ್ನ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸುತ್ತೇನೆ ಎಂದರು.
ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಪಕ್ಷ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದರು.
Kshetra Samachara
11/06/2022 02:45 pm