ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾಂವಿಧಾನಿಕ ಪೀಠದ ದುರ್ಬಳಕೆ: ಹೊರಟ್ಟಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಾಂವಿಧಾನಿಕ ಪೀಠದ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎಂ.ಭರತ್ ಎನ್ನುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಚುನಾವಣಾ ಸಂದರ್ಭದಲ್ಲಿ, ತಾವು ಸಭಾಪತಿಗಳಾಗಿದ್ದ ಬುಕ್‌ಲೆಟ್‌ಗಳನ್ನು ಪ್ರಿಂಟ್ ಹಾಕಿಸಿ ಆ ಬುಕ್‌ಗಳನ್ನು ವಿತರಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಪ್ರಕಾರ ಸಾಂವಿಧಾನಿಕ ಪೀಠದ ಚಿತ್ರವನ್ನು ಬಳಕೆ ಮಾಡುವಂತಿಲ್ಲ. ಹೀಗಾಗಿ ಹೊರಟ್ಟಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈಗಾಗಲೇ ಉತ್ತರ ನೀಡುವಂತೆಯೂ ಹೊರಟ್ಟಿ ಅವರಿಗೆ ಆಯೋಗ ನೋಟಿಸ್ ಕೂಡ ಜಾರಿ ಮಾಡಿದೆ. ಹೊರಟ್ಟಿ ಅವರು ಉತ್ತರ ನೀಡಿದ ನಂತರವೂ ನಾವು ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರವೂ 19 ವರ್ಷಗಳ ಕಾಲ ಶಿಕ್ಷಕರ ವೇತನ ಭತ್ಯೆ ಪಡೆದಿದ್ದಾರೆ. ತಾವು ಸೇವೆ ಸಲ್ಲಿಸುತ್ತಿದ್ದ ಲ್ಯಾಮಿಂಗ್ಟನ್ ಶಾಲೆಯ ಮೂಲಕ 19 ವರ್ಷಗಳ ಕಾಲ ವೇತನ ಪಡೆದಿದ್ದಾರೆ ಎಂದು ಭರತ್ ಆರೋಪಿಸಿದರು.

ಕಳೆದ 42 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹೊರಟ್ಟಿ ಅವರು ಪ್ರತಿ ಸಲವೂ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಮ್ಮ ಪ್ರಣಾಳಿಕೆಯಲ್ಲೂ ಹಾಕಿಕೊಳ್ಳುತ್ತಾರೆ. ಆದರೆ, ಇದುವರೆಗೂ ಆ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಶಿಕ್ಷಕರು ಬಹಳ ಯೋಚನೆ ಮಾಡಿ ಮತ ಹಾಕಬೇಕಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

11/06/2022 01:26 pm

Cinque Terre

19.06 K

Cinque Terre

3

ಸಂಬಂಧಿತ ಸುದ್ದಿ