ಧಾರವಾಡ: ಸಾಂವಿಧಾನಿಕ ಪೀಠದ ಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೆಲವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ಚುನಾವಣಾ ಆಯೋಗದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪುಸ್ತಕದ ಮೇಲೆ ಆ ಚಿತ್ರವನ್ನು ಚುನಾವಣೆಗೆ ಮುನ್ನವೇ ಹಾಕಿಸಿದ್ದೇನೆ. ಕಾನೂನು ಪ್ರಕಾರ ಏನಾಗುತ್ತದೆಯೋ ನೋಡೋಣ. ನೋಟಿಸ್ ಬಂದರೆ ನಾನು ಅದಕ್ಕೆ ಉತ್ತರ ಕೊಡುತ್ತೇನೆ ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆ ಗದ್ದಲಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ಆರೋಪ ಮಾಡುವವರು ಇಷ್ಟು ದಿನ ಮಲಗಿದ್ದರಾ? ಚುನಾವಣೆ ಬಂದಾಗ ಮಾತ್ರ ಈ ರೀತಿಯ ಆರೋಪ ಮಾಡುತ್ತಾರೆ. ಇದು ಕೇವಲ ಅಪಪ್ರಚಾರಕ್ಕಾಗಿ ಮಾತ್ರ ಈ ರೀತಿಯ ಆರೋಪ ಮಾಡುತ್ತಾರೆ. ಆರೋಪ ಮಾಡುವವರು ಧಾರವಾಡದ ಮಾನಸಿಕ ಆಸ್ಪತ್ರೆಗೆ ಹೋಗಲಿ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 01:07 pm