ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಗುರಿಕಾರ ಪರ ಕಾಂಗ್ರೆಸ್ ಮುಖಂಡರಿಂದ ಪ್ರಚಾರ

ನವಲಗುಂದ : ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ನವಲಗುಂದ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಅಧ್ಯಕ್ಷ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ಶುಕ್ರವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಿರುಸಿನ ಪ್ರಚಾರ ಮಾಡಿದರು.

ನವಲಗುಂದ ಪಟ್ಟಣದ ವಿವಿಧ ಶಾಲಾ ಕಾಲೇಜುಗಳು ಸೇರಿದಂತೆ ತಾಲ್ಲೂಕಿನ ತಡಹಾಳ, ಶಲವಡಿ, ಹಳ್ಳಿಕೇರಿ, ಇಬ್ರಾಹಿಂಪೂರ, ನಾವಳ್ಳಿ, ದಾಟನಾಳ, ಗುಡಿಸಾಗರ ಗ್ರಾಮಗಳ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು.

ಈ ವೇಳೆ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ಮಾಡಿ ಮಕ್ಕಳಿಗೆ ಮೊಬೈಲ್ ಯುಗದಲ್ಲಿ ತಮ್ಮ ಬದುಕು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಬೋಧನೆ ಮಾಡುವ ಬದಲು ಪಠ್ಯ ಪುಸ್ತಕದಲ್ಲಿ ಅಧ್ಯಾಯ ಬದಲಾವಣೆ ಮಾಡಲು ಹೋಗಿ ವಿವಿಧ ಜಾತಿಗಳಿಗೆ ಸಂಘರ್ಷ ಉಂಟು ಮಾಡಲು ಸರ್ಕಾರವೇ ಕಾರಣವಾಗಿದೆ. ಇದನ್ನು ಸರಿ ಮಾಡಲು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಕೋನರಡ್ಡಿ ಹಾಗೂ ವಿನೋದ ಅಸೂಟಿ ಅವರು ಶಿಕ್ಷಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷವರ್ಧಮಾನಗೌಡ್ರ, ಹಿರೇಗೌಡ್ರ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ಪುರಸಭೆ ಸದಸ್ಯರುಗಳಾದ ಮಂಜು ಜಾಧವ, ಜೀವನ ಪವಾರ, ಮೋದಿನ ಶಿರೂರ, ಹನಮಂತ ವಾಲಿಕಾರ, ಮಹಾಂತೇಶ ಭೋವಿ, ಶಿವಾನಂದ ತಡಸಿ, ಮುಖಂಡರುಗಳಾದ ಸದುಗೌಡ ಪಾಟೀಲ, ಆರ್.ಹೆಚ್. ಕೋನರಡ್ಡಿ, ಉಸ್ಮಾನ ಬಬರ್ಚಿ, ಹನಮಂತ ಚಿಕ್ಕಣ್ಣವರ, ಮಲ್ಲಿಕಾರ್ಜುನ ಹಳ್ಳಿ, ಶ್ರೀಶೈಲ ಬಸವರಡ್ಡಿ, ಸತೀಶ ಮಮಟಗೇರಿ, ದೇವಪ್ಪ ವಗ್ಗರ, ಸಿದ್ದಲಿಂಗಪ್ಪ ಅಂಗಡಿ, ಅರುಣಕುಮಾರ ಮಜ್ಜಗಿ, ಬಸವರಾಜ ಮಣ್ಣೂರ, ನಿಂಗಪ್ಪ ಮರಿನಾಯ್ಕರ, ರಮೇಶ ನವಲಗುಂದ, ವಿಕಾಸ ತದ್ದೆವಾಡಿ, ಸುಲೇಮಾನ ನಾಶಿಪುಡಿ, ರವಿ ಬೆಂಡಿಗೇರಿ, ಪರಶುರಾಮ ಹೊನಕೇರಿ, ಗುರುಶಾಂತಗೌಡ ಪಾಟೀಲ, ರಾಜಣ್ಣ ಹಳ್ಯಾಳ, ಕುಮಾರ ಗಿರಡ್ಡಿ ಸೇರಿದಂತೆ ಹಲವರು ಇದ್ದರು.

Edited By : PublicNext Desk
Kshetra Samachara

Kshetra Samachara

10/06/2022 07:34 pm

Cinque Terre

8.98 K

Cinque Terre

0

ಸಂಬಂಧಿತ ಸುದ್ದಿ