ಕುಂದಗೋಳ : ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಕುಂದಗೋಳ ಹಾಗೂ ಸಂಶಿ ಗ್ರಾಮದ ಶಿಕ್ಷಕರಲ್ಲಿ ಮತಯಾಚನೆ ಮಾಡಿದರು.
ಹೌದು ! ರಮೇಶ್ ಕೊಪ್ಪದ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಸಂಶಿ ಗ್ರಾಮದ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಸಂಶಿ ಮತ್ತು ಶ್ರೀ ಜಗದ್ಗುರು ಪಕ್ಕಿರೇಶ್ವರ ಶಿವಯೋಗಿಶ್ವರ ಪ್ರೌಢ ಶಾಲೆ ಸಂಶಿ ಸೇರಿದಂತೆ ಕುಂದಗೋಳ ತಾಲೂಕಿನ ವಿವಿಧೆಡೆ ಶಿಕ್ಷಕರಲ್ಲಿ ಬಸವರಾಜ ಗುರಿಕಾರ ಅಭಿವೃದ್ಧಿ ರೂಪುರೇಷೆ ತಿಳಿಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಗದೀಶ್ ಉಪ್ಪಿನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
Kshetra Samachara
10/06/2022 08:13 am