ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಬ್ಬರಿಗೆ 42 ವರ್ಷ ಅವಕಾಶ ಕೊಟ್ಟಿದ್ದು ಸಾಕು: ಹೊರಟ್ಟಿ ವಿರುದ್ಧ ಸಿದ್ದು ವಾಗ್ದಾಳಿ

ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾಕಾಶಿ ಧಾರವಾಡದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಜೆಎಸ್‌ಎಸ್ ಕಾಲೇಜಿನ ಉತ್ಸವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾದ ಸಿದ್ದರಾಮಯ್ಯ ಅವರು, ಬಸವರಾಜ ಗುರಿಕಾರ ಅವರ ಪರವಾಗಿ ಮತಯಾಚಿಸಿದ್ರು. ಅಲ್ಲಿಂದ ನೇರವಾಗಿ ಧಾರವಾಡದ ದೈವಜ್ಞ ಕಲ್ಯಾಣಮಂಟಪಕ್ಕೆ ಬಂದು ಅಲ್ಲಿ ನಡೆದ ಶಿಕ್ಷಕರ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶದ ಭಾಷಣದಲ್ಲಿ ಸಿದ್ದರಾಮಯ್ಯನವರು ಬಿಜೆಪಿ ಹಾಗೂ ಬಸವರಾಜ ಹೊರಟ್ಟಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

42 ವರ್ಷದ ಅಧಿಕಾರಾವಧಿಯಲ್ಲಿ ಏನನ್ನೂ ಮಾಡದ ಹೊರಟ್ಟಿಯನ್ನು ಅಷ್ಟು ವರ್ಷ ಅಧಿಕಾರದಲ್ಲಿಟ್ಟವರೇ ಶಿಕ್ಷಕರು. ಅಧಿಕಾರದಲ್ಲಿ ಇರದೇ ಇದ್ದರೂ ಗುರಿಕಾರ ಅಪಾರ ಕೆಲಸ ಮಾಡಿದ್ದಾರೆ. ಈ ರಾಜ್ಯ ಸರ್ಕಾರದ ಸಾಧನೆಯನ್ನು ನೋಡುವುದಕ್ಕೋಸ್ಕರ ನಾನು ಒಂದು ವೇದಿಕೆ ಕರೆದೆ. ಆದರೆ, ಬಿಜೆಪಿಯವರಿಗೆ ಧಮ್ ಇಲ್ಲ. ಅವರು ಬರಲಿಲ್ಲ. ಬಿಜೆಪಿ ಸರ್ಕಾರ ಬಡವರಿಗೆ ಮನೆ ಮಾಡಿಕೊಡಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಇಂತಹವರಿಗೆ ನಾವು ಮತ ಹಾಕ್ಬೇಕಾ? ಈಶ್ವರಪ್ಪ, ರಮೇಶ್ ಜಾರಕಿಹೊಳಿಯಂತಹ ಮಾನ ಇಲ್ಲದವರು ನಮ್ಮ ಮಧ್ಯೆ ಇರಬೇಕಾ? ಅಂತ ಪ್ರಶ್ನಿಸಿದ್ರು.

ಇನ್ನು ಬಸವರಾಜ ಗುರಿಕಾರ ಮಾತನಾಡಿ 42 ವರ್ಷಗಳಿಂದ ಶಿಕ್ಷಕರು ಸಮಸ್ಯೆಯ ಸುಳಿಯಲ್ಲೇ ಸಿಲುಕಿದ್ದು, ಈ ವರ್ಷ ಬದಲಾವಣೆ ಬಯಸಿ ತಮಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದ್ರು..

ಈ ಶಿಕ್ಷಕರ ಸಮಾವೇಶದಲ್ಲಿ ಶಾಸಕ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಕುಸುಮಾವತಿ ಶಿವಳ್ಳಿ ಸೇರಿದಂತೆ ಅನೇಕ ನಾಯಕರುಗಳು ಪಾಲ್ಗೊಂಡಿದ್ದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/06/2022 04:13 pm

Cinque Terre

66.32 K

Cinque Terre

4

ಸಂಬಂಧಿತ ಸುದ್ದಿ