ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ಜ್ಞಾನವ್ಯಾಪಿ ಮಸೀದಿಯಿಂದ ಹಿಡಿದು ಜಾಮೀಯಾ ಮಸೀದಿವರೆಗೆ ಬಂದು ನಿಂತಿದೆ. ಅಣ್ಣ ತಮ್ಮಂದಿರ ಮಧ್ಯೆ ಜಗಳ ಹಚ್ಚಬೇಡಿ, ಎಲೆಕ್ಷನ್ ಬರುತ್ತಿದೆ, ಈಗ ಇದೆಲ್ಲ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಸಂಚಾರ ಮಾಡಿದ್ದೇನೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ನಮ್ಮಲ್ಲಿರುವ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡಬೇಡಿ. ರಾಜಕೀಯಕ್ಕಾಗಿ ನಮ್ಮ ಮಧ್ಯೆಯೇ ಜಗಳ ಹಚ್ಚಬೇಡಿ. ಪಠ್ಯ ಪುಸ್ತಕದಿಂದ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಸಿಎಂ ಇದರ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಒಂದೆಡೆ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದೆ. ಮತ್ತೊಂದೆಡೆ ನಮಾಜ್ ಮಾಡಲಾಗುತ್ತಿದೆ. ಆದರೆ ಚುನಾವಣೆ ಬಂದಾಗ ಗೊಂದಲ ಸೃಷ್ಟಿ ಆಗುತ್ತಿದೆ. ನಾವು ನಮ್ಮ ಜವಾಬ್ದಾರಿಯಿಂದ ನಡೆಯುತ್ತಿದ್ದೇವೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದಿದ್ದೇನೆ. ನಮ್ಮಲ್ಲೆ ಕೆಲವರಿಂದ ಗೊಂದಲ ಸೃಷ್ಟಿ ಆಗುತ್ತಿದೆ. ನಮ್ಮ ಸಮಾಜದಲ್ಲಿನ ಕೆಲವು ಜನ ಧರ್ಮ ಧರ್ಮ ಮಧ್ಯೆ ಜಗಳ ಹಚ್ಚುವ ರೀತಿಯಲ್ಲಿ ಪ್ರಚೋದನೆ ಕೊಡುತ್ತಿದ್ದಾರೆ. ನಮ್ಮ ನಾಯಕರು ಸೇರಿ ಬೇರೆ ಬೇರೆ ಪಕ್ಷದವರು ಪ್ರಚೋದನೆ ಕೊಡಬಾರದು ಅಂತಿದ್ದಾರೆ ಎಂದರು.
ಸಿದ್ದರಾಮಯ್ಯ ಪ್ಯಾಂಟ್ ಹಾಕಿಕೊಂಡು ತಾವು ಹಾಕಿಕೊಂಡ ಚೆಡ್ಡಿ ಮಾತ್ರ ಅಲ್ಪಸಂಖ್ಯಾತ ರಿಗೆ ಕೊಟ್ಟಿದ್ದಾರೆ ಅನ್ನೋ ವಿಚಾರವಾಗಿ ಮಾತನಾಡಿದ ಅವರು, ಇಬ್ರಾಹಿಂಗೂ ಚೆಡ್ಡಿ ಹಾಕಿದ್ದೆ ಸಿದ್ದರಾಮಯ್ಯ. ಇಬ್ರಾಹಿಂ ಅದನ್ನ ನೆನಪು ಮಾಡಿಕೊಳ್ಳಲಿ, ಗಂಗಾವತಿಯಲ್ಲಿ ಸೋತು ಬಂದಾಗ ಇಬ್ರಾಹಿಂ ಅವರನ್ನ ಎಂಎಲ್‌ಸಿ ಮಾಡಿದ್ದೇ ಸಿದ್ದರಾಮಯ್ಯ. ಇಬ್ರಾಹಿಂ ಅಧಿಕಾರ ಸಿಕ್ಕರೆ ಸಿದ್ದರಾಮಯ್ಯ ಅಂತಿದ್ರು. ಅಧಿಕಾರ ಸಿಗದೇ ಇದ್ದಾಗ ಸಿದ್ದರಾಮಯ್ಯ ಅಲ್ಲ ಅಂದಿದ್ದಾರೆ. ಸಿಎಂ ಇಬ್ರಾಹಿಂಗೆ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಟಾಂಗ್ ಕೊಟ್ಟರು.
Kshetra Samachara
04/06/2022 07:16 pm