ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆಯಲ್ಲಿ ಮತ್ತೊಂದು ಪೈಪೋಟಿ: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೈ ನಾಯಕರ ಲಾಬಿ...!

ಹುಬ್ಬಳ್ಳಿ: ಬಹು ದಿನಗಳ ನಂತರ ಅಂತೂ ಇಂತೂ ಕೊನೆಗೂ ಭಾರಿ ಕಸರತ್ತು ಮಾಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌- ಉಪಮೇಯರ್‌ ಆಯ್ಕೆ ಮಾಡಲಾಗಿದ್ದು, ಈಗ ಪಾಲಿಕೆಯ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಗಾದಿಗೆ ನೀರಿಕ್ಷೆಯಂತೆ ಭಾರತೀಯ ಜನತಾ ಪಕ್ಷ ಏರಿದೆ. ಆದರೆ ಈಗ ಕಾಂಗ್ರೆಸ್‌ನಲ್ಲಿ ವಿರೋಧ ಪಕ್ಷದ ನಾಯಕನ ಪಟ್ಟಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ.

ಹೌದು..ಕಳೆದ ಮೂರು ವರ್ಷಗಳಿಂದ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ನಂತರ ಸಾಕಷ್ಟು ಜನರ ಆಕ್ರೋಶದ ಬಳಿಕ ಚುನಾವಣೆ ನಡೆಸಲಾಯಿತು. ನಂತರ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮತ್ತೇ 9 ತಿಂಗಳು ಕಾಲ ನೆನೆಗುದಿಗೆ ಬಿದ್ದಿತ್ತು. ಮತ್ತೆ ಜನರ ಆಕ್ರೋಶ ಕಟ್ಟೆ ಒಡೆಯುವ ಮುನ್ನ ಮೇಯರ್ ಉಪಮೇಯರ್ ಆಯ್ಕೆ ಮಾಡಲಾಯಿತು. ಈಗ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೆಸ್ ಪಾಳೆಯದಲ್ಲಿ ಬಹುದೊಡ್ಡ ಕಸರತ್ತು ನಡೆದಿದೆ. ಈಗ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆಯಾಗಲು ಚುನಾಯಿತ ಕಾಂಗ್ರೆಸ್ ಸದಸ್ಯರು ಪೈಪೋಟಿ ನಡೆಸಿದ್ದಾರೆ.

ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ಸದಸ್ಯ ಬಲದ ಪಾಲಿಕೆಯಲ್ಲಿ 39 ಸ್ಥಾನಗಳನ್ನು ಗೆದ್ದು ಬಿಜೆಪಿ ಆಡಳಿತ ಪಕ್ಷವಾಗಿದೆ. 33 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರತಿಪಕ್ಷದ ನಾಯಕನಾಗಲು ಕೆಲವು ಕಾಂಗ್ರೆಸ್‌ ಸದಸ್ಯರು ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಅವರ ಬೆನ್ನು ಬಿದ್ದಿದ್ದಾರೆ. ಕೆಲವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್‌ ಬೆನ್ನು ಬಿದ್ದಿದ್ದು, ಇನ್ನೂ ಕೇಲ ಸದಸ್ಯರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಅವರಿಂದ ಶಿಫಾರಸು ಮಾಡಿಸಲು ಮುಂದಾಗಿದ್ದಾರೆ‌. ಶಾಸಕ ಅಬ್ಬಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿರಂಜನಯ್ಯ ಹಿರೇಮಠ ಪೈಪೋಟಿ ನಡೆಸುತ್ತಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಸಮರ್ಥವಾಗಿ ವಿರೋಧ ಪಕ್ಷದ ನಾಯಕನ ಸ್ಥಾನ ನಿಭಾಯಿಸುತ್ತೇನೆ ಎನ್ನುತ್ತಾರೆ ನಿರಂಜನ ಹಿರೇಮಠ.

ಶಾಸಕ ಅಬ್ಬಯ್ಯಗೂ ಇದು ಚುನಾವಣೆ ವರ್ಷ. ತಮ್ಮ ಆಪ್ತರನ್ನೇ ನಾಯಕರನ್ನಾಗಿ ಮಾಡಿದರೆ ಮುಂದೆ ಚುನಾವಣೆಯಲ್ಲಿ ಸಹಾಯವಾಗಬಹುದು ಎಂಬ ಆಲೋಚನೆ ಇದ್ದಂತಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದ್ದವರಲ್ಲಿ ಯಾರಾಗ್ತಾರೆ ವಿಪಕ್ಷ ನಾಯಕ ಎಂಬುವುದನ್ನು ಕಾದುನೋಡಬೇಕಿದೆ.

Edited By : Shivu K
Kshetra Samachara

Kshetra Samachara

01/06/2022 02:09 pm

Cinque Terre

14.35 K

Cinque Terre

3

ಸಂಬಂಧಿತ ಸುದ್ದಿ