ಹುಬ್ಬಳ್ಳಿ: ರಾಜ್ಯಸಭೆ ಮಾತ್ರವಲ್ಲದೆ ಎಲ್ಲಾ ಚುನಾವಣೆಗೆ ಗೆಲುವಿನ ನಂತರವೇ ಬಿಜೆಪಿ ತಂತ್ರ ಗೊತ್ತಾಗುತ್ತದೆ. ಪ್ರಸ್ತುತವಾಗಿ ನಮ್ಮ ತಂತ್ರವನ್ನು ಬಹಿರಂಗ ಪಡಿಸಿಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪ್ರಧಾನಿ ಮೋದಿ ಸರ್ಕಾರದ ಪುರಸ್ಕೃತ ಯೋಜನೆಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ನಮ್ಮ ಸ್ಟ್ಯಾಟರ್ಜಿ ಏನು ಅಂತ ಬಹಿರಂಗ ಪಡಿಸಲು ಆಗೋದಿಲ್ಲ. ಮತದಾನವಾಗಲಿ ಆಮೇಲೆ ಹೇಗೆ ಸ್ಟ್ಯಾಟರ್ಜಿ ಮಾಡಿದ್ವಿ ಎನ್ನುವುದನ್ನು ಹೇಳುತ್ತೇನೆ. ನಮಗೆ ಬಹಳ ನಂಬಿಕೆ ಇದೆ. ನಮ್ಮ ಮೂರನೇ ಅಭ್ಯರ್ಥಿ ಕೂಡ ಗೆಲ್ಲುತ್ತಾರೆ. ಯಾಕೆಂದರೆ ಆ ಎರಡೂ ಪಕ್ಷಗಳಿಗಿಂತ ಹೆಚ್ಚಿನ ಮತ ನಮ್ಮಲ್ಲಿವೆ, ಹೀಗಾಗೇ ನಾವು ಗಲ್ಲುತ್ತೇವೆ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅನಗತ್ಯ ವಿವಾದ ಮಾಡಲಾಗುತ್ತಿದೆ. ಆ ಕಮಿಟಿಯವರು ಮಾಡ್ತಿದ್ದಾರೆ ಮಾಡ್ಲಿ. ಅದು ಬಿಟ್ಟು ಪಠ್ಯಪಸ್ತಕವೇ ಇನ್ನು ಹೊರಗಡೆ ಬಂದಿಲ್ಲ. ಕೆಲವರು ಇದನ್ನ ವಿವಾದ ಎಬ್ಬಿಸೋ ಕೆಲಸಕ್ಕೆ ಕೈ ಹಾಕಿದ್ದಾರೆ. ಬಸವಣ್ಣನವರ ಕುರಿತು ವಿವಾದ ವಿಚಾರ ನಾನಿನ್ನು ಅದನ್ನ ಓದಿಲ್ಲ ಪುಸ್ತಕ ಓದಿಕೊಂಡು ಮಾತನಾಡುತ್ತೇನೆ. ಮಂದಿರ v/s ಮಸೀದಿ ಗದ್ದಲ ವಿಚಾರದಲ್ಲಿ ಎಲ್ಲವನ್ನೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಮಳಲಿ ಮಸೀದಿಯವರು ಸೌಹಾರ್ದಯುತ ಬಗೆಹರಿಸುವ ಮಾತನಾಡಿದ್ದಾರೆ. ನೋಡೋಣ ಏನು ಮಾಡುತ್ತಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/05/2022 09:36 pm