ಧಾರವಾಡ: ಧಾರವಾಡ ಮೆಹಬೂಬ್ ನಗರದ ಗಾದಿ ಕಾರ್ಖಾನೆ ಬಳಿ ನಡೆದ ಬ್ಯಾನರ್ ಗಲಾಟೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮೇ 12ರಂದು ಭೀಮೋತ್ಸವ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಫೋಟೋ ಹಾಕಿಸಿದ್ದಕ್ಕೆ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಮತ್ತು ಯೂಥ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಅವರ ಮನೆಗೆ ಹೋದ ಕೆಲವರು, ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೇ 12ರಂದು ಧಾರವಾಡದಲ್ಲಿ ನಡೆದ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಫೋಟೋವನ್ನು ಫೈರೋಜ್ ಖಾನ್ ಪಠಾಣ್ ಮತ್ತು ಯೂಥ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಅವರು ಬ್ಯಾನರ್‌ನಲ್ಲಿ ಹಾಕಿಸಿದಕ್ಕೆ, ಇವರಿಗೆ ಕಾಂಗ್ರೆಸ್ ಮುಖಂಡ ಮೈನುದ್ದಿನ್, ಫೋನ್‌ನಲ್ಲಿ ಜೀವ ಬೆದರಿಕೆ ಹಾಕಿ, ಮನೆಗೆ 20 ಜನರ ಗುಂಪೊಂದನ್ನು ಕರೆದುಕೊಂಡು ಬಂದು ಫೈರೋಜ್ ಪಠಾಣ್‌ಗೆ ಧಮ್ಕಿ ಹಾಕಿದ್ದಾರೆ. ಇನ್ನು ಪೋನ್‌ನಲ್ಲಿ ಮಾಜಿ ಸಚಿವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಧಾರವಾಡ ಕಾಂಗ್ರೆಸ್‌ನಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡು ನಿಂದಿಸಿರುವ ಘಟನೆ ನಡೆದಿದೆ. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಕೆಲ ಕಾಂಗ್ರೆಸ್ ಮುಖಂಡರು ಹೆದರಿ ಪ್ರತಿದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಘಟನೆ ಬಳಿಕ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ 14 ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
16/05/2022 09:45 pm