ಜನ್ಮದಿನ ಬಂತಂದರೆ ಸಾಕು, ಮೋಜು ಮಸ್ತಿ ಮಾಡುವ ಕಾಲದಲ್ಲಿ, ಇಲ್ಲೊಬ್ಬ ಯುವ ನಾಯಕ ತನ್ನ ಜನ್ಮದಿನದಂದು ಬಡವರಿಗೆ ಸಹಾಯ, ಸಮಾಜ ಸೇವೆ ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಕೊಂಡಿದ್ದಾರೆ.
ಮೇ 10 ರಂದು ಬಿಜೆಪಿ ಯುವ ನಾಯಕ ಮಣಿಕಂಠ ಶ್ಯಾಗೋಟಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಗಿಫ್ಟ್ ಅ ಲೈಫ್ ಫೌಂಡೇಶನ್ ಹಾಗೂ ಗೆಳೆಯರ ಬಳಗದ ವತಿಯಿಂದ, ಶಾಲಾ ಮಕ್ಕಳಿಗೆ ಬುಕ್ ವಿತರಣೆ ಮಾಡಿದ್ದಾರೆ. ಕೇಶ್ವಾಪೂರದಲ್ಲಿರುವ ಶ್ರೀ ವಾಲ್ಮೀಕಿ ಸಮುದಾಯ ಭವನಕ್ಕೆ ಬಣ್ಣ ಹಚ್ವಿಸಿದ್ದಾರೆ. ಅಜಾದ ಕಾಲೋನಿಯ ಉರ್ದು ಸ್ಕೂಲ್‌ನಲ್ಲಿ ಸಸಿ ನೆಟ್ಟಿದ್ದಾರೆ. ನಾಗಶೆಟ್ಟಿಕೊಪ್ಪದಲ್ಲಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಮತ್ತು ಮುಕ್ತಿಧಾಮ ಸಿಬ್ಬಂದಿಗೆ ಬಟ್ಟೆ ನೀಡಿ ಸನ್ಮಾನ ಮಾಡಿ ನೆನಪಿನ ಕಾಣಿಕೆ ವಿತರಿಸಿ ಜನ್ಮದಿನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ.
ಮಣಿಕಂಠ ಶ್ಯಾಗೋಟಿ ಅವರು, ಸುಮಾರು 5 ವರ್ಷಗಳ ಹಿಂದೆ ಗಿಫ್ಟ್ ಅ ಲೈಫ್ ಫೌಂಡೇಶನ್ ವನ್ನು ಸ್ಥಾಪನೆ ಮಾಡುವುದರ ಮೂಲಕ ಪ್ರತಿವರ್ಷ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತ ಬಂದಿದ್ದಾರೆ. ಇವರ ಈ ಸಮಾಜ ಸೇವೆ ಹೀಗೆ ಮುಂದುವರೆಯಲಿ. ಮುಂದಿನ ಜೀವನ ಸುಖಕರವಾಗಲಿ...
ಇವರ ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ನಾಯಕ ಸಂಕಲ್ಪ ಶೆಟ್ಟರ್, ಮಹಾನಗರ ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕರ, ರೂಪಾ ಶೆಟ್ಟಿ, ಉಮಾ ಮುಕುಂದ್, ಮೀನಾಕ್ಷಿ ವಂಟಮೂರಿ, ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ರುದ್ರಾಕ್ಷಿಮಠ, ಹಾಗೂ ವಾರ್ಡ್ ನಂಬರ 45 ರ ಸಮಸ್ತ ಗುರು ಹಿರಿಯರು ಭಾಗವಹಿಸಿ, ಪ್ರಮುಖ ಬಿಜೆಪಿ ಮುಖಂಡರು ಇವರ ಕಾರ್ಯವನ್ನು ಶ್ಲಾಘಿಸಿ ಶುಭಕೋರಿದರು
Kshetra Samachara
12/05/2022 09:13 pm