ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೊಮ್ಮಾಯಿ ಕಲಹಪ್ರಿಯ ಮುಖ್ಯಮಂತ್ರಿ ಎಂಬ ಹೆಸರು ಪಡೆಯಬಾರದು

ಧಾರವಾಡ: ಅಜಾನ್ ಹಾಗೂ ಸುಪ್ರಭಾತ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊಸರಿನಲ್ಲಿ ಕಲ್ಲು ಹುಡಕುವ ಪ್ರಯತ್ನ ಮಾಡುತ್ತಿವೆ. ಅಧಿಕಾರ ನಡೆಸುವವರು ಜವಾಬ್ದಾರಿಯುತವಾಗಿ ಅಧಿಕಾರ ನಡೆಸಬೇಕು. ಎಲ್ಲರಿಗೂ ಸರಿಸಮಾನ ನ್ಯಾಯ ಕೊಡಬೇಕು. ಶಾಂತವಾದ ನೀರನ್ನು ಕಲಕುವ ಕೆಲಸ ನಡೆಯುತ್ತಿದೆ. ಇದರಿಂದ ಸಮನ್ವಯದ ಆಡಳಿತ ನಡೆಯುವುದಿಲ್ಲ. ಸಿಎಂ ಇದರ ಬಗ್ಗೆ ಆಲೋಚನೆ ಮಾಡಬೇಕು. ಇದನ್ನೆಲ್ಲ ನಿಯಂತ್ರಿಸದೇ ಕಲಹ ಪ್ರಿಯ ಮುಖ್ಯಮಂತ್ರಿ ಎಂದು ಬೊಮ್ಮಾಯಿ ಹೆಸರು ಪಡೆದುಕೊಳ್ಳಬಾರದು ಎಂದರು.

ಆಡಳಿತಾರೂಢ ಪಕ್ಷದಲ್ಲಿನ ಶಾಸಕರು, ಸಚಿವರು ಸಿಎಂ ಹತೋಟಿಯಲ್ಲಿಲ್ಲವೇ? ಅಥವಾ ಪಕ್ಷ ಹಾಗೂ ಪಕ್ಷದ ಅನುಯಾಯಿಗಳು ಹತೋಟಿಯಲ್ಲಿ ಇಲ್ಲವೇ? ಆರ್‌ಎಸ್‌ಎಸ್ ಹಾಗೂ ಭಜರಂಗದಳ ಕಂಟ್ರೋಲ್‌ನಲ್ಲಿ ಇಲ್ಲ. ಸಿಎಂ ತಮ್ಮ ಕರ್ತವ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದರು.

ಪಿಎಸ್‌ಐ ಅಕ್ರಮ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುವುದು ಗೃಹ ಸಚಿವರ ಜವಾಬ್ದಾರಿ. ಪಿಎಸ್‌ಐ ನೇಮಕಾತಿ ನಡೆಸೋದು ಪೊಲೀಸ್ ಇಲಾಖೆ. ಇದು ಗೃಹ ಸಚಿವರ ಹತೋಟಿಯಲ್ಲೇ ಇಲ್ಲ. ಭ್ರಷ್ಟಾಚಾರದ ಒಂದೊಂದೆ ಪ್ರಕರಣಗಳು ಹೊರಬರುತ್ತಿವೆ. ನಾನು ಸಿಎಂ ಇದ್ದಾಗ ಸಾಕಷ್ಟು ಪಿಎಸ್ಐ ನೇಮಕಾತಿ ನಡೆದಿವೆ. ಒಂದು ಕಡೆಯೂ ಅಕ್ರಮ ಹೊರ ಬಂದಿಲ್ಲ. ಆಯಾ ಇಲಾಖೆಯ ಸಚಿವರು ಅವರವರ ಇಲಾಖೆ ಮೇಲೆ ಜವಾಬ್ದಾರಿ ಹೊಂದಿರಬೇಕು. ಉನ್ನತ ಪೊಲೀಸ್ ಅಧಿಕಾರಿಗಳ ಅಮಾನತ್ತು ಆಗಿಲ್ಲ. ಯಾವ ಸಚಿವರೂ ಪದವಿ ಬಿಟ್ಟುಕೊಟ್ಟಿಲ್ಲ. ಇವರಲ್ಲಿ ನೈತಿಕ, ಭೌತಿಕ ಜವಾಬ್ದಾರಿ ಎರಡೂ ಇಲ್ಲ ಎಂದರು.

ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಪಾರದರ್ಶಕ ಆಡಳಿತ ಕೊಡುತ್ತೇವೆ. ಜನರಿಗೆ ವಿಶ್ವಾಸ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ. ಕಾಂಗ್ರೆಸ್‌ನಲ್ಲಿ ಕೇಂದ್ರ ನಾಯಕರ ಹತೋಟಿ ಇದೆ ಎಂದು ಮೊಯ್ಲಿ, ಡಿಕೆಶಿ, ಸಿದ್ದರಾಮಯ್ಯ ನಾಯಕತ್ವದ ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅವರವರ ಜವಾಬ್ದಾರಿಯನ್ನು ಅವರು ನಿರ್ವಹಿಸಿಕೊಂಡು ಹೋಗಬೇಕು. ಇದರಲ್ಲಿ ಜಗಳ ಇಲ್ಲ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/05/2022 03:59 pm

Cinque Terre

107.97 K

Cinque Terre

5

ಸಂಬಂಧಿತ ಸುದ್ದಿ