ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 2023ರವರೆಗೂ ಬೊಮ್ಮಾಯಿಯವರೇ ಸಿಎಂ ಆಗಿರ್ತಾರೆ; ಕೇಂದ್ರ ಸಚಿವ ಜೋಶಿ ಭರವಸೆ

ಹುಬ್ಬಳ್ಳಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಿಲ್ಲ. 2023ರವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಇರುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಸಚಿವ ಸಂಪುಟದ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಇವತ್ತಿನ ನನ್ನ ಸಿಎಂ ಭೇಟಿಯಲ್ಲಿ ವಿಶೇಷತೆ ಇಲ್ಲ. ಇಬ್ಬರು ಒಂದೇ ಪಕ್ಷದ ನಾಯಕರು ಸಾಮಾನ್ಯವಾಗಿ ಭೇಟಿಯಾಗುತ್ತಿರುತ್ತೇವೆ. ನಾನು ಏನು ಅವರನ್ನು ಏರ್ಪೋರ್ಟ್‌ಗೆ ಕರೆಸಿಲ್ಲ. ಅವರೇ ಬಂದಿದ್ದಾರೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ. ಸಂಪುಟ ವಿಸ್ತರಣೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ನೀವೇ ನಾಯಕತ್ವ ಬದಲಾವಣೆ ಬಗ್ಗೆ ಹೇಳುತ್ತಿದ್ದರಿ. ಆದರೆ ಅದ್ಯಾವುದು ನಮ್ಮ ಪಕ್ಷದಲ್ಲಿಲ್ಲ. ದಯವಿಟ್ಟು ಯಾರು ಉಹಾಪೋಹಗಳನ್ನು ನಂಬಬೇಡಿ ಎಂದು ಹೇಳಿದರು.

ಸಿಎಂ ಖುರ್ಚಿಗೆ 2,500 ಕೋಟಿ ರೂ. ಕೇಳಿದ್ದಾರೆ ಎನ್ನುವ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರೇ ಇಂದು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪಾರ್ಟಿಯಲ್ಲಿ ಅಲ್ಲ ಕಾಂಗ್ರೆಸ್ ಅಂತ ಅವರೇ ಹೇಳಿದ್ದಾರೆ ಎಂದು ಶಾಸಕ ಯತ್ನಾಳ ಹೇಳಿಕೆಗೆ ಸಮಜಾಯಿಷಿ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/05/2022 09:54 pm

Cinque Terre

49.06 K

Cinque Terre

10

ಸಂಬಂಧಿತ ಸುದ್ದಿ