ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿಯತ್ತ ಸಭಾಪತಿ ಬಸವರಾಜ್ ಹೊರಟ್ಟಿ: ಧಾರವಾಡ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ...!

ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಮುಂದಾಗುತ್ತಿದಂತೆ ಧಾರವಾಡ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಯಡಿಯೂರಪ್ಪನವರ ಆಪ್ತ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಕೆಂಡಾಮಂಡಲವಾಗಿದ್ದಾರೆ.

ಬಿಜೆಪಿ ರಾಷ್ಟ್ರದಲ್ಲಿಯೇ ದೊಡ್ಡ ಪಕ್ಷ, ಈ ಪಕ್ಷಕ್ಕೆ ಇಬ್ಬರೇ ನಾಯಕರಿಲ್ಲ. ಇವರಿಬ್ಬರಿಂದಲೇ ನಮ್ಮ ಬಿಜೆಪಿ ಪಕ್ಷವಿಲ್ಲ. ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾರಂತ ಸಾಕಷ್ಟು ಜನರಿದ್ದಾರೆ. ಯಾರೋ ಈ ಇಬ್ಬರು ವ್ಯಕ್ತಿಗಳು ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆಂದ್ರೆ, ನಾವು ತಕ್ಷಣ ಬೇರೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಮೋಹನ್ ಲಿಂಬಿಕಾಯಿ ವಾಗ್ದಾಳಿ ನಡೆಸಿದರು.

ಹೊರಟ್ಟಿಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಒಕೆ, ಆದ್ರೂ ಟಿಕೆಟ್ ನೀಡುವಾಗ ವಿಚಾರ ಮಾಡಿ ನೋಡಿ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ, ನಾನು ಬೇಡ ಎಂದ್ರೆ ಬಿಡಿ, ಸಮರ್ಥವಾಗಿದ್ದವರಿಗೆ ಟಿಕೆಟ್ ನೀಡಿ. ಪಕ್ಷ ಬೆಳೆಯಬೇಕು ಎಂದುಕೊಂಡರೆ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಿ. ಹೊರಟ್ಟಿಯವರಿಗೆ ಟಿಕೆಟ್ ನೀಡಿದ್ರೆ ಪಕ್ಷದ ಕಾರ್ಯಕರ್ತರಲ್ಲಿ ಕೆಟ್ಟ ಸಂದೇಶ ಹೋಗುತ್ತದೆ, ಅದು ಆಗಬಾರದು. ಯಾವುದೇ ಕಾರಣಕ್ಕೂ ಬಸವರಾಜ ಹೊರಟ್ಟಿಯವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಡಿ. ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ನೀವೆ ಪ್ರಚಾರ ಮಾಡಿ ಅಂತ ಹೇಳಿದ್ದರು. ಚುನಾವಣಾ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಜವಾಬ್ದಾರಿ ನೀಡಿದ್ದರು.ನಾವಿಬ್ಬರೂ ಸೇರಿ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇವೆ.

ನಮ್ಮದೊಂದೆ ಹೆಸರನ್ನ ಕೇಂದ್ರಕ್ಕೆ ಕಳಿಸಿದ್ದಾರೆಂದು ಮಾಧ್ಯಮಗಳಲ್ಲಿ ಸಹ ಬಂತು. ಅಲ್ಲದೇ ಕ್ಷೇತ್ರದ ಶಿಕ್ಷಕರು ನಾನೇ ಅಭ್ಯರ್ಥಿ ಎಂದು ತಿಳಿದು ಸಾಕಷ್ಟು ಕೆಲಸ ಈಗಾಗಲೇ ಮಾಡಿದ್ದಾರೆ. ಶಿಕ್ಷಕರರು ನನ್ನ ಪರವಾಗಿ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಹೊರಟ್ಟಿಯವರು ಈ ಹಿಂದೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದರು. ಅವಾಗ ನಾನೂ ಯಾರು ನಮ್ಮ‌ ಪಕ್ಷದ ಮುಖಂಡರು ಹೊರಟ್ಟಿಯವರನ್ನ ಪಕ್ಷಕ್ಕೆ ಆಹ್ವಾನಿಸಿಲ್ಲ ಎಂದು ನಾನು ಹೇಳಿದ್ದೆ‌. ಈಗ ಧಿಡೀರನೇ ಅಮಿತ್ ಷಾ ಎದುರು ಜೋಶಿ ಮತ್ತು ಶೆಟ್ಟರ್ ಹೊರಟ್ಟಿಯವರನ್ನು ಕರೆದುಕೊಂಡ ಹೋಗಿದ್ದಾರೆ. ಮೊದಲು ನನಗೆ ನೀನೆ ಅಭ್ಯರ್ಥಿ ಎಂದು ಹೇಳಿ ಈಗಾ ಏಕಾಏಕಿ ಅವರನ್ನ ಪಕ್ಷಕ್ಕೆ ಏಕೆ ಸೇರ್ಪಡೆ ಮಾಡಿಕೊಂಡರೋ ಎಂಬುದು ನನಗೆ ಗೊತ್ತಿಲ್ಲ ಎಂದರು.

ಬಸವರಾಜ ಹೊರಟ್ಟಿಯವರಿಗೆ ಬಹಳಷ್ಟು ಶಿಕ್ಷಕರ ವಿರೋಧವಿತ್ತು. ಇದರಿಂದ ಬಸವರಾಜ ಹೊರಟ್ಟಿಯವರಿಗೆ ಸೋಲಿನ ಭಯವಿತ್ತು. ನಮ್ಮದು ರಾಷ್ಟ್ರೀಯ ಪಕ್ಷ, ದೊಡ್ಡ ಮಟ್ಟದಲ್ಲಿ ಸದಸ್ಯರನ್ನ ಹೊಂದಿರುವ ಪಕ್ಷ. ನಾನು ಕಾರ್ಯಕರ್ತರ ನಿರಂತರವಾಗಿ ಸಂಪರ್ಕದಲ್ಲಿದ್ದೆ, ಆದ್ರೆ ಈಗ ಏಕೆ ಮಾಡಿದ್ರು ಎಂಬುದು ಮಾತ್ರ ನನಗೆ ಗೊತ್ತಿಲ್ಲ. ನಾನು ಎರಡ್ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ. ಈಗ ಹೊರಟ್ಟಿಯವರನ್ನ ಪಕ್ಷಕ್ಕೆ ಕರೆದುಕೊಂಡು ಬಂದಿದ್ದು ನನಗೆ ಬೇಸರ ತಂದಿದೆ ನಾನು ಮುಂದೆ ಏನ್ ಮಾಡಬೇಕು ಎಂಬುದನ್ನ ನಮ್ಮ ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ.

ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನನ್ನ ಹೆಸರನ್ನ ಜಗದೀಶ್ ಶೆಟ್ಟರ್ ಅವರೇ ಪ್ರಸ್ತಾಪ ಮಾಡಿದ್ದರು. ಮೋಹನ್ ‌ಲಿಂಬಿಕಾಯಿ ಟಿಕೆಟ್ ನೀಡಿದ್ರೆ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅವರೇ ಈಗ ಹೊರಟ್ಟಿಯವರನ್ನ ಪಕ್ಷಕ್ಕೆ ಸೇರಿಸಲು ಮುಂದಾಳತ್ವ ವಹಿಸಿಕೊಳ್ಳುವದನ್ನ ನೋಡಿದ್ರೆ ನಗಗೆ ವಿಪರ್ಯಾಸ ಎನ್ನಿಸುತ್ತದೆ. ಕಾಯ್ದು ನೋಡೊಣ, ಇದಕ್ಕೆ ಎಲ್ಲವೂ ಕಾಲವೇ ನಿರ್ಧಾರ ಮಾಡುತ್ತೆ, ನಾನು ಸಮರ್ಥ ಅಭ್ಯರ್ಥಿ ಆಗದೆ ಇದ್ದರೆ, ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ. ಅದನ್ನ ಬಿಟ್ಟು ಪಕ್ಷದ ಹೊರಗಿನವರನ್ನ ತಂದು ಚುನಾವಣೆ ಮಾಡೋದು ಬೇಡ ಎಂದು ನಾನೂ ಈ ಹಿಂದೆ ಹೇಳಿದ್ದೆ. ಬೇರೆ ಪಕ್ಷದವರನ್ನ ಕರೆದುಕೊಂಡು ಬಂದು ಚುನಾವಣೆ ಮಾಡುವ ಅವಶ್ಯಕತೆ ನಮ್ಮ ಪಕ್ಷಕ್ಕೆ ಇರಲಿಲ್ಲ. ಈ ಕ್ಷೇತ್ರದಲ್ಲಿ 22 ಶಾಸಕರು ಬರ್ತಾರೆ, ಇದರಲ್ಲಿ 17 ಜನರ ಬಿಜೆಪಿ ಶಾಸಕರಿದ್ದಾರೆ. ಮೂವರು ಲೋಕಸಭಾ ಸದಸ್ಯರು, ನಾಲ್ಕು ಜನ ವಿಧಾನ ಪರಿಷತ್ ಸದಸ್ಯರು ನಮ್ಮ ಪಕ್ಷದವರಿದ್ದಾರೆ. ಒಬ್ಬೆ ಒಬ್ಬ ಜೆಡಿಎಸ್ ಪಾಲಿಕೆ ಸದಸ್ಯನಿಲ್ಲ, ಒಬ್ಬ ಎಮ್‌ಪಿ ಇಲ್ಲ, ಒಬ್ಬ ಎಮ್‌ಎಲ್‌ಸಿ ಇಲ್ಲ. ಈಗಾಗಿ ಹೊರಟ್ಟಿಯವರಿಗೆ ಅಲ್ಲಿ ಸೋಲಿನ ಭಯವಿತ್ತು, ಅದರಿಂದ ಬಿಜೆಪಿಗೆ ಬಂದಿದ್ದಾರೆ. ನಮ್ಮ ಪಕ್ಷಕ್ಕೆ ಬಂದು ಮತ್ತೆ ಗೆಲವು ಸಾಧಿಸಬೇಕೆಂದು ನಮ್ಮ ಪಕ್ಷಕ್ಕೆ ಹೊರಟ್ಟಿಯವರು ಕಾಲಿಟ್ಟಿದ್ದಾರೆ. ಅವರು ಗೆಲವಿನ ಕನಸು ಕಾಣುವುದು ತಪ್ಪಲ್ಲ, ಈ ಬಗ್ಗೆ ನಮ್ಮ ಪಕ್ಷದ ನಾಯಕರು ವಿಚಾರ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/05/2022 12:52 pm

Cinque Terre

60.17 K

Cinque Terre

6

ಸಂಬಂಧಿತ ಸುದ್ದಿ