ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಭಾಪತಿ ಸ್ಥಾನಕ್ಕೆ ಮೇ 11 ರಂದು ರಾಜೀನಾಮೆ: ಬಸವರಾಜ ಹೊರಟ್ಟಿ

ಧಾರವಾಡ: ನನ್ನ ಸಭಾಪತಿ ಸ್ಥಾನಕ್ಕೆ ಮೇ.11ರಂದು ರಾಜೀನಾಮೆ ನೀಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಧಾರವಾಡದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು ಇಲ್ಲಿಯವರೆಗೂ ಯಾವುದು ಅಧಿಕೃತವಾಗಿಲ್ಲ, ಭಾರತ ಸರ್ಕಾರದ ಗೃಹ ಮಂತ್ರಿಗಳನ್ನ ಭೇಟಿಯಾಗಿದ್ದೇನೆ, ಮಾತುಕತೆಗಳು ಸಹಜವಾಗಿ ಬರ್ತಿವೆ. ಸಭಾಪತಿ ಆಗಿರುವುದರಿಂದ ಬೇರೆ ಪಕ್ಷದ ಬಗ್ಗೆ ಮಾತಾಡಲು ಬರಲ್ಲ ಹಾಗಾಗಿ 11 ರಂದು ಸಂಜೆಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

ಇನ್ನು ರಾಜೀನಾಮೆ ಬಳಿಕ ನನ್ನ ಮುಂದಿನ ನಡೆ ತಿಳಿಸುತ್ತೇನೆ . ಇನ್ನು ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಅವರು ಶಾ ಅವರು ನನ್ನ ಬಗ್ಗೆ ಕೇಳಿದ್ರಂತೆ ಒಳ್ಳೆ ಹೆಸರು ಇಟ್ಟುಕೊಂಡಿದ್ದಿರಿ ಎಂದು ಹೇಳಿದರು. ಭೇಟಿಯಾಗಿದ್ದು ಖುಷಿಯಾಗಿದೆ ಎಂದು ತಿಳಿಸಿದರು.

ಟಿಕೆಟ್ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ 11 ರವರೆಗೂ ಯಾವುದೇ ರೀತಿಯ ರಾಜಕೀಯದ ಬಗ್ಗೆ ಮಾತನಾಡಲ್ಲ. ಟಿಕೆಟ್ ಸಿಗಲಿಲ್ಲಾ ಎಂಬ ಪ್ರಶ್ನೆಗೆ ಪಕ್ಷಕ್ಕೆ ಸೇರಿದ ಮೇಲೆ ವಿಚಾರ ಮಾಡುವೆ ರಾಜೀನಾಮೆ ನೀಡಿ ಮುಂದಿನ ನಡೆ ಹೇಳುವೆ ಎಂದು ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/05/2022 10:25 pm

Cinque Terre

102.97 K

Cinque Terre

19

ಸಂಬಂಧಿತ ಸುದ್ದಿ