ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಕ್ಷಬೇಧ ಮರೆತು ಅಭಿವೃದ್ಧಿ ಜಪ ಹೊತ್ತ ಜನತಾ ಜಲಧಾರೆ ಸಕ್ಸಸ್

ಕುಂದಗೋಳ : ಗುರುಗೋವಿಂಧ ಭಟ್ಟರ ಹುಟ್ಟೂರು, ಸಂತ ಶಿಶುನಾಳ ಶರೀಫರ ಗುರುವಿನ ತವರೂರು, ಶ್ರೀ ಕ್ಷೇತ್ರ ಕಳಸ ಗ್ರಾಮದಿಂದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ನೇತೃತ್ವದ ಜನತಾ ಜಲಧಾರೆ ಜಲಯಾತ್ರೆ ಚಾಲನೆ ಜನರಲ್ಲಿ ಜಲ ಸಂಪನ್ಮೂಲದ ಬಗ್ಗೆ ಜಾಗೃತಿ ಮೂಡಿಸಿತು.

ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಅದಕ್ಕೆ ತಕ್ಕಂತೆ ಜಾನಪದ ಡೊಳ್ಳಿನ ಹೆಂಗೆಳೆಯರ ಮೇಳ ಅಬ್ಬಾ ! ನಿಜಕ್ಕೂ ಇದು ಜಾತ್ರೆಯೋ, ಹಬ್ಬವೋ ಎಂಬಂತಿತ್ತು. ಮನೆ ಬಾಗಿಲು, ಕಟ್ಟೆ ಮೇಲೆ ಕೂತಂತಹ ಜನರ ಕುತೂಹಲಕ್ಕೆ ಜನತಾ ಜಲಧಾರೆ ಜಲಯಾತ್ರೆ ಸಾಕ್ಷಿಯಾಯಿತು.

ಕಳಸ ಗ್ರಾಮದ ರಂಭಾಪುರೀ ದೇವಸ್ಥಾನದಿಂದ ಹೊರಟ ಯಾತ್ರೆ ಮೊದಲ ದಿನವೇ ಅಪಾರ ಜನಮನ್ನಣೆಗೆ ಪಾತ್ರವಾಗಿರ ಗುಡಗೇರಿ ತಲುಪಿ ತಾಯಿ ದ್ಯಾಮವ್ವದೇವಿ ದರ್ಶನದ ಬಳಿಕ ಮುರುಘಾಮಠದ ಶರಣರ ಊರು ಪಶುಪತಿಹಾಳ ತಲುಪಿ ಜನಸಾಗರ ಬೆಂಬಲದ ಜೈಕಾರಕ್ಕೆ ಪಾತ್ರವಾಯಿತು.

ನೂರಾರು ಜೆಡಿಎಸ್ ಕಾರ್ಯಕರ್ತರ ಬೆಂಬಲದಲ್ಲಿ ಜನತಾ ಜಲಧಾರೆ ಜಲಯಾತ್ರೆ ಮೊದಲ ದಿನವೇ ಯಶಸ್ವಿಯಾಗಿದ್ದು, ಹಜರತ್'ಅಲಿ ಜೋಡಮನಿಯವರ ರಾಜಕೀಯದ ಸಲಹೆಗಾರ ಅಲಿ ಸಂದಿಮನಿ ತಂತ್ರಗಾರಿಕೆ ಯಶಸ್ಸಾಯಿತು ಜೆಡಿಎಸ್ ಪಕ್ಷದ ಪುರುಷ ಮಹಿಳಾ ಕಾರ್ಯಕರ್ತರ ಬಲ ಎದ್ದು ತೋರಿತು.

ರಾಜಕೀಯದಲ್ಲಿ ಪಕ್ಷಬೇಧ ಮರೆತ ಕುಂದಗೋಳ ಮತಕ್ಷೇತ್ರದ ಬೆಣ್ಣೆ ಹಳ್ಳದ ಪ್ರವಾಹ ನಿಯಂತ್ರಿಸಿ, ಅದರಿಂದಾಗುವ ಹಾನಿ ತಪ್ಪಿಸಿ, ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಬಳಕೆಗೆ ವ್ಯವಸ್ಥಿತ ಯೋಜನೆಯ ಜನತಾ ಜಲಧಾರೆಗೆ ಸರ್ವರ ಆಶ್ರೀವಾದ ಲಭಿಸಿ ಹಜರತ್'ಅಲಿ ಜೋಡಮನಿಗೆ ಸಂತಸ ತಂದಿತು.

Edited By : Manjunath H D
Kshetra Samachara

Kshetra Samachara

02/05/2022 09:52 pm

Cinque Terre

55.08 K

Cinque Terre

1

ಸಂಬಂಧಿತ ಸುದ್ದಿ