ಧಾರವಾಡ: ಸಿಎಂ ಅವರ ಹುಬ್ಬಳ್ಳಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೋರಟ್ಟಿದ್ದ ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ಅಧಿಕಾರಿಗಳಿಂದ ತಡೆ ಉಂಟಾಯಿತ್ತು.
ಹೌದು ಜಲಮಂಡಳಿ ನೌಕರರು ಎಲ್ ಆ್ಯಂಡ್ ಟೀ ಕಂಪನಿಗೆ ಜಲಮಂಡಳಿಯ ನಿರ್ವಹಣೆ ನೀಡುತ್ತಿರುವುದಕ್ಕೆ ಮುಷ್ಕರ ನಡೆಸಿದ್ದಾರೆ. ಈ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದು, ಇಂದು ಹುಬ್ಬಳ್ಳಿಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನೌಕರರೊಂದಿಗೆ ಮುಂದಾಗಿದ್ದರು.
ಇದಕ್ಕಾಗಿ ಪಾದಯಾತ್ರಯನ್ನು ಆರಂಭಿಸಿದ್ದರು. ಈ ವೇಳೆ ಪೊಲೀಸರು ಧಾರವಾಡದ ಜಲಮಂಡಳಿ ಗೇಟ್ ಹಾಕಿ ಪಾದಯಾತ್ರೆ ತಡೆಯಲು ಯತ್ನಿಸಿದರು. ಈ ವೇಳೆ ರೊಚ್ಚಿಗೆದ್ದ ಕೈ ನಾಯಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಪಾದಯಾತ್ರೆ ಆರಂಭಿಸಿದ್ದಾರೆ.
Kshetra Samachara
01/05/2022 06:14 pm