ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ʼಯಾತ್ರಿ ನಿವಾಸʼ ಉದ್ಘಾಟನೆಗೆ ಬಿಡದ ವಿನಯ್ ಕುಲಕರ್ಣಿ ಬೆಂಬಲಿಗರು!

ಧಾರವಾಡ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಯಾತ್ರಿ ನಿವಾಸದ ಉದ್ಘಾಟನೆಗೆ ಬಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಶಾಸಕ ಅಮೃತ ದೇಸಾಯಿ ಅವರಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಂಬಲಿಗರು ಶಾಕ್ ನೀಡಿದ ಘಟನೆ ನಡೆಯಿತು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಅವಧಿಯಲ್ಲಿ ಹೆಬ್ಬಳ್ಳಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ಯಾತ್ರಿ ನಿವಾಸದ ಮುಂದೆ ಹಾಕಲಾಗುವ ಕಲ್ಲಿನ ಬೋರ್ಡ್‌ನಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಹಾಕದೇ ಇರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರ ಬೆಂಬಲಿಗರು, ಯಾತ್ರಿ ನಿವಾಸಕ್ಕೆ ಬೀಗ ಹಾಕಿ ಉದ್ಘಾಟನೆಗೆ ಅವಕಾಶ ಮಾಡಿಕೊಡಲಿಲ್ಲ.

ಜೋಶಿ, ಸಿ.ಟಿ.ರವಿ ಹಾಗೂ ಅಮೃತ ದೇಸಾಯಿ ಬರುತ್ತಿದ್ದಂತೆಯೇ ಯಾತ್ರಿ ನಿವಾಸದ ಮುಂದೆ ಜಮಾಯಿಸಿದ ವಿನಯ್ ಬೆಂಬಲಿಗರು, ಕಲ್ಲಿನ ಬೋರ್ಡ್‌ನಲ್ಲಿ ವಿನಯ್ ಅವರ ಹೆಸರನ್ನೇ ಹಾಕಿಸಿಲ್ಲ. ಅವರ ಹೆಸರು ಹಾಕಿಸಿದ ನಂತರ ಉದ್ಘಾಟನೆ ಮಾಡಿ ಎಂದರು.

ಇದಕ್ಕೆ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯಿಸಿ, ಶಿಷ್ಟಾಚಾರದ ಪ್ರಕಾರ ಇದನ್ನು ಉದ್ಘಾಟನೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು. ಇದಕ್ಕೆ ಒಂದೂ ಮಾತನಾಡದ ಸಚಿವ ಜೋಶಿ, ಇದು ನಮಗೇನೂ ಗೊತ್ತಿಲ್ಲ ಎಂಬಂತೆ ಅಲ್ಲಿಂದ ಹೊರಟು ಹೋದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2022 10:09 pm

Cinque Terre

90.07 K

Cinque Terre

61

ಸಂಬಂಧಿತ ಸುದ್ದಿ