ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಗಲಭೆ ಮಾಡುವವರೆಲ್ಲರೂ ಜಮೀರ್ ಅಹ್ಮದ ಅಣ್ಣ ತಮ್ಮಂದಿರು: ಸಿ.ಟಿ.ರವಿ ಕಿಡಿ..!

ಹುಬ್ಬಳ್ಳಿ: ಮಾಜಿ ಸಚಿವ ಜಮೀರ್ ಅಹ್ಮದ್ ಅವರದು ಇದು ಮೊದಲ ಘಟನೆ ಅಲ್ಲ. ಈ ಹಿಂದೆ ಕೆಜೆ ಹಳ್ಳಿ,ಡಿಜೆ ಹಳ್ಳಿ ಗಲಾಟೆ ಆಗಿದ್ದ ಸಂದರ್ಭದಲ್ಲಿ ಕೂಡ ಪುಂಡರಿಗೆ ಜಮೀರ್ ಅಹ್ಮದ್ ಅಣ್ಣ ತಮ್ಮಂದಿರು ಅಂತ ಕೆಪಿಸಿಸಿ ಅಧ್ಯಕ್ಷರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಜಮೀರ್ ಕೂಡ ಅದನ್ನೇ ಆಗ ಹೇಳಿದ್ದರು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಹುಬ್ಬಳ್ಳಿಯ ಗಲಭೆಯ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಅಕ್ರಮ ಎಸಗಿದವರ ಪರ ವಕಾಲತ್ತು ಮಾಡಿರಬಹುದು. ಅದಕ್ಕೆ ಈ ರೀತಿ ಇಂತಹ ನಿರ್ಧಾರಕ್ಕೆ ಅಪಸ್ವರ ಎತ್ತುತ್ತಿದ್ದಾರೆ. ಈಗ ಆಗಿರುವ ತಪ್ಪುಗಳಿಂದ ಪಾಠ ಕಲಿತು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ಬಿಜೆಪಿಯಲ್ಲಿ ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಿದ್ಧರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಸಿದ್ಧರಾಮಯ್ಯನವರಷ್ಟು ಪ್ರಾಮಾಣಿಕರು ಯಾರೂ ಇಲ್ಲ. ಅವರ ಪ್ರಾಮಾಣಿಕತೆಗೆ ಕೆಂಪಣ್ಣ ಆಯೋಗದ ವರದಿ ತೆಗೆದು ನೋಡಿದರೆ ಸರ್ಟಿಫಿಕೇಟ್ ಸಿಗುತ್ತದೆ ಎಂದು ಲೇವಡಿ ಮಾಡಿದರು.

ಗಲಭೆಕೋರರಿಗೆ ಜಮೀರ್ ನೆರವಿನ ಹಸ್ತ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನವರು ಇಂತಹ ಗಲಭೆಕೋರರ ಓಲೈಕೆಗೆ ಮುಂದಾಗಿದ್ದಾರೆ. ಗಲಭೆಕೋರರಿಗೆ ಸಹಕಾರ ನೀಡುವುದು ಅವರ ಕೆಲಸ. ಓಟ್ ಬ್ಯಾಂಕ್ ಸಲುವಾಗಿ ಗಲಭೆ ಕೋರರ ಓಲೈಕೆಗೆ ಮುಂದಾಗಿದ್ದಾರೆ. ಗಲಭೆಕೋರರು ಎಲ್ಲರೂ ತಮ್ಮ ಸಹೋದರಂತೆ ಕಾಂಗ್ರೆಸ್ ನವರು ಭಾವಿಸುತ್ತಾರೆ‌. ಕಾಂಗ್ರೆಸ್ ನವರಿಗೆ ಕಾನೂನಿನ ಮೇಲೆ ನಂಬಿಕೆ ಇಲ್ಲ. ನಂಬಿಕೆ ಇದ್ದಿದ್ರೆ ಕಾಂಗ್ರೆಸ್ ನವರು ಈ ರೀತಿ ವರ್ತನೆ ಮಾಡುತ್ತಿರಲಿಲ್ಲ. ಮುಸ್ಲಿಂರ ರೀತಿಯಲ್ಲಿ ಹಿಂದೂ ಸಮಾಜದವರು ಪ್ರತಿಕ್ರಿಯೆ ನೀಡಿದರೆ, ದೇಶದಲ್ಲಿ ಯಾವೆಲ್ಲ ಅನಾಹುತಗಳು ಸಂಭವಿಸುತ್ತಿದ್ದವು ಎಂದು ಅವರು ಎಚ್ಚರಿಕೆ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2022 08:09 pm

Cinque Terre

92.54 K

Cinque Terre

18

ಸಂಬಂಧಿತ ಸುದ್ದಿ