ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆಯ ಹಿನ್ನೆಲೆಯಲ್ಲಿ ಬಂಧಿಸಲಾದ ಬಂಧಿತರ ಮನೆಗೆ ಫುಡ್ ಕಿಟ್ ಧನ ಸಹಾಯಕ್ಕೆ ಮುಂದಾಗಿರುವ ಮಾಜಿ ಸಚಿವ ಜಮೀರ್ ಅಹ್ಮದ ಖಾನ ಅವರ ನಡೆಯನ್ನು ಖಂಡಿಸಿ ಹಾಗೂ ಯಾವುದೇ ಕಾರಣಕ್ಕೂ ಹಣ ಹಾಗೂ ಫುಡ್ ಕಿಟ್ ವಿತರಣೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಳೇ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಗಲಭೆಯಲ್ಲಿ ಸುಮಾರು 200 ಜನರನ್ನು ಬಂಧಿಸಿ ಪೋಲಿಸ ಇಲಾಖೆಯವರು ವಿಚಾರಣೆಗೆ ಒಳಪಡಿಸಿದ್ದು ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಇಂಹತ ಕ್ಲಿಸ್ಟಕರ ಸಮಯದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮುಖಂಡರಾದ ಜಮೀರ ಅಹ್ಮದ ಹಾಗೂ ಸ್ಥಳಿಯ ಶಾಸಕರು, ಮುಖಂಡರು ಇಂತಹ ಸಮಾಜ ಘಾತುಕ ದುಷ್ಟಶಕ್ತಿಗಳ ಪರಿವಾರದವರಿಗೆ ದಿನಸಿ ಕಿಟ್ ಹಾಗೂ ಧನ ವಿತರಣೆಯನ್ನು ಮಾಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯು ಹರಡಿದ್ದು ಇದನ್ನು ನಾವು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಶಾಂತವಾಗಿದ್ದ ಹುಬ್ಬಳ್ಳಿಯನ್ನು ಉದ್ದೇಶ ಪೂರ್ವಕವಾಗಿ ನಗರದಲ್ಲಿ ಗಲಭೆ ಸೃಷ್ಟಿಮಾಡಿ ಶಾಂತತೆಯನ್ನು ಭಂಗಮಾಡಿದ್ದು ಪೋಲಿಸ್ ಠಾಣೆಗೆ ನುಗ್ಗಿ ದಾಂದಲೆ ಮಾಡಿ ಪೋಲಿಸರಿಗೆ ಕಲ್ಲು ತೂರಿ ಗಾಯಗೊಳಿಸಿದ್ದು, ಇಂತಹ ದುಷ್ಟಶಕ್ತಿಗಳಿಗೆ ನಾವು ಯಾವುದೇ ರೀತಿ ದಿನಸಿ ಕಿಟ್ ಆಗಲಿ ಧನ ಸಹಾಯ ಮಾಡುವುದನ್ನು ವಿತರಣೆ ಮಾಡಲು ನಮ್ಮ ಪಕ್ಷದ ವಿರುದ್ಧ ಇರುತ್ತದೆ, ಯಾವುದೇ ಕಾರಣಕ್ಕೂ ವಿತರಣೆ ಮಾಡಲು ಅವಕಾಶವನ್ನು ನೀಡಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2022 06:09 pm