ಹುಬ್ಬಳ್ಳಿ: ಸಿನಿಮಾಗೆ ಯಾವುದೇ ಭಾಷೆ ಇಲ್ಲ. ಭಾಷೆ ಇಲ್ಲದ ಭಾವನಾತ್ಮಕ ಚಿತ್ರಣವೇ ಈ ಸಿನಿಮಾ. ಇಲ್ಲಿ ಯಾವುದೇ ರೀತಿಯಲ್ಲಿ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕುವುದು ಸರಿಯಲ್ಲ. ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಭಾಷೆಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಜಲಧಾರೆ ಅಭಿಯಾನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ವೇಳೆಯಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಮೇಲೆ ಹೇರಿಕೆ ಮಾಡುವುದು ಸರಿಯಲ್ಲ ಎಂದರು.
ಸಿನಿಮಾಗಳಿಗೆ ಯಾವುದೇ ಭಾಷೆಗಳಿಲ್ಲ, ನಟರು ಈ ವಿಚಾರಕ್ಕೆ ಹೋಗಬಾರದು. ಸಿನಿಮಾ ಅನ್ನೋದು ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರ. ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಅದರದೆ ಆದ ಸ್ಥಾನ ಮಾನಗಳು ಇರುತ್ತವೆ. ಹಿಂದಿ ಹೇರಿಕೆ ಒತ್ತಡ ತಂತ್ರ ಸರಿಯಲ್ಲ ಎಂದು ಅವರು ಹೇಳಿದರು.
ಪಿಎಸ್‌ಐ ಹಗರಣದ ರೂವಾರಿ ದಿವ್ಯಾ ಹಾಗರಗಿ ಬಂಧಿಸಿದ ವಿಚಾರವಾಗಿ, ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ಅವಳು ರಾಜಕೀಯ ಕೃಪಾ ಕಟಾಕ್ಷದಲ್ಲಿ ಇದ್ದಾಳೋ ಗೊತ್ತಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಯಾರ ಕಣ್ಣಿಗೂ ಸಿಗದೇ ಇರೋದು ಅವರೆಷ್ಟು ಶಕ್ತಿಶಾಲಿ ಅನ್ನೋದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2022 07:44 pm