ಧಾರವಾಡ: ಹಿಂದಿ, ಇಂಗ್ಲಿಷ್ ಭಾಷೆಗಳು ಆಡಳಿತ ಭಾಷೆಯಲ್ಲಿ ಒಂದಾಗಿವೆ. ಆದರೆ, ಸಂವಿಧಾನದಲ್ಲಿ ಎಲ್ಲೂ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಕರೆದಿಲ್ಲ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ 343 ಹಾಗೂ 344 ನೇ ವಿಧಿ ಪ್ರಕಾರ ಹಿಂದಿ ಕೇಂದ್ರ ಸರ್ಕಾರದ ಎರಡು ಆಡಳಿತ ಭಾಷೆಯಲ್ಲಿ ಒಂದಾಗಿದೆ. ಕನ್ನಡ ಒಳಗೊಂಡಂತೆ ಎಲ್ಲಾ ಭಾಷೆಗಳು ರಾಷ್ಟ್ರದ ಭಾಷೆಗಳೇ ಹೊರತು ರಾಷ್ಟ್ರೀಯ ಭಾಷೆಗಳಲ್ಲ ಎಂದರು.
ಜನರ ಮಾತೃ ಭಾಷೆಗಳಿಗೆ ಮಹತ್ವ ಸಿಗಬೇಕು. ಹಿಂದಿಗೆ ಒಂದು ಆಯೋಗವನ್ನು ನೇಮಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಆ ಸಮಿತಿ ಕೇವಲ ಹಿಂದಿಗೆ ಮಾತ್ರ ಇರಬಾರದು. ಇದು ಎಲ್ಲ ರಾಜ್ಯಗಳಲ್ಲಿ ಅನುಷ್ಠಾನ ಆಗಿದೆ. ಅದನ್ನು ಚೆಕ್ ಮಾಡಬೇಕು. ಹಿಂದಿ ಕಲಿಕೆ ಬೇರೆ. ಹಿಂದಿ ಹೇರಿಕೆ ಬೇರೆ. ಎರಡರಲ್ಲೂ ವ್ಯತ್ಯಾಸ ಇದೆ. ನಾನು ಹಿಂದಿ ಕಲಿಕೆಗೆ ವಿರೋಧಿಯಲ್ಲ. ಹಿಂದಿ ಹೇರಿಕೆಯ ವಿರೋಧಿ ಎಂದರು.
ಸರ್ವ ಭಾಷಾ ಸಮಾನತೆಯ ಯಾವುದೇ ಒಕ್ಕೂಟ ಸರ್ಕಾರದ ನೀತಿಯಾಗಬೇಕು. ಭಾಷೆಯನ್ನು ಅವರವರ ಇಚ್ಛೆಗೆ ಅನುಗುಣವಾಗಿ ಕಲಿಯಲಿ. ಸದ್ಯ ಹಿಂದಿ ಹೇರಿಕೆ ವಿಚಾರವನ್ನು ಸರ್ಕಾರಗಳು ವಿರೋಧಿಸಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರು ಅದನ್ನು ಸರ್ಕಾರಗಳು ವಿರೋಧಿಸಬೇಕು ಎಂದರು.
ಅಮಿತ್ ಶಾ ಹೇಳಿಕೆಗೆ ರಾಜ್ಯ ಸರ್ಕಾರ ವಿರೋಧ ಮಾಡಬೇಕು. ರಾಜ್ಯದ ಸಿಎಂ ಗಳು ಸಭೆ ಮಾಡಿ ರಾಷ್ಟ್ರೀಯ ಭಾಷಾ ನೀತಿಯನ್ನು ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2022 05:36 pm