ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ ಮಂದಿ ಮಾತು ಕೇಳದ ಬಿಜೆಪಿಗರು; ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!

ಹುಬ್ಬಳ್ಳಿ: ಕೋವಿಡ್ ಬಂದಿದ್ದೇ ಬಂದಿದ್ದು, ಸರ್ಕಾರ ದಿನಕ್ಕೊಂದು ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ಕಾರದ ನಿರ್ಧಾರಕ್ಕೆ ಬಡವನ ಸಿಟ್ಟು ದವಡೆಗೆ ಮೂಲ ಎಂಬಂತೆ ಸಾರ್ವಜನಿಕರು ತಲೆ ಹಾಕುತ್ತಲೇ ಮೂರು ಅಲೆ ಮುಕ್ತಾಯ ಮಾಡಿದ್ದಾರೆ.

ಆದರೆ, ಈಗ ನಾಲ್ಕನೇ ಅಲೆ ಆರಂಭವಾಗಿದ್ದು, ಸರ್ಕಾರ ಹೊಸ ನಿರ್ದೇಶನ ಜಾರಿಗೊಳಿಸಿ ಆದೇಶ ಮಾಡಿದೆ. ಆದರೆ, ಡಬಲ್ ಇಂಜಿನ್ ಸರ್ಕಾರದ ನಿರ್ಧಾರ ಡಮ್ಮಿ ಆದಂತಾಗಿದ್ದು, ಮನೆಯ ಮಂದಿಯೇ ಮಾತನ್ನು ಕೇಳದಂತ ಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯ ಸರ್ಕಾರ ನಿನ್ನೆಯಷ್ಟೇ ದೊಡ್ಡದಾಗಿ ಆದೇಶವನ್ನು ಮಾಡಿ ಮಾಸ್ಕ್ ಕಡ್ಡಾಯಗೊಳಿಸಿದೆ. ಆದರೆ, ಹುಬ್ಬಳ್ಳಿಯಲ್ಲಿಯ ಬಿಜೆಪಿ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಮಾತ್ರವಲ್ಲದೆ ರಾಜ್ಯ ಸಚಿವ ಸಂಪುಟದ ನಾಯಕರಿಗೂ ಮನೆಯವರೇ ಹೇಳಿದ ಮಾತು ಕೇಳಿಲ್ಲ ಎಂಬಂತಾಗಿದೆ.

ಮೊನ್ನೆಯಷ್ಟೇ ಸರ್ಕಾರ ನಿರ್ಧಾರ ಮಾಡಿದ್ದು, ನಿನ್ನೆ ನಡೆದ ಸಭೆಯಲ್ಲಿ ಒಬ್ಬರೂ ಕೂಡ ಮಾಸ್ಕ್ ಹಾಕದೇ ಸರ್ಕಾರದ ಮಾತನ್ನು ಧಿಕ್ಕರಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಇದ್ದರೂ ಕಾರ್ಯಕರ್ತರು ಹಾಗೂ ಮುಖಂಡರು ಮಾತ್ರ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಇದರಿಂದ ಆದೇಶಗಳು ಸಾರ್ವಜನಿಕರಿಗೆ ಅನುಸರಿಸಲು ಮಾಡಿರುವ ನಿರ್ಧಾರಗಳು ಇವುಗಳು ಬಿಜೆಪಿ ನಾಯಕರಿಗೆ ಅನ್ವಯಿಸದಂತಾಗಿದೆ. ಮನೆಯ ಹಿರಿಯರ ಮಾತೇ ಇವರು ಕೇಳಲ್ಲ ಅಂದರೆ ಇನ್ನು, ಸಾರ್ವಜನಿಕರ ಮಾತು ಯಾವಾಗ ಇವರ ಕಿವಿಗೆ ಮುಟ್ಟಬೇಕಿದೆ ನೀವೇ ಹೇಳಿ!

Edited By :
Kshetra Samachara

Kshetra Samachara

27/04/2022 12:48 pm

Cinque Terre

21.98 K

Cinque Terre

2

ಸಂಬಂಧಿತ ಸುದ್ದಿ