ಹುಬ್ಬಳ್ಳಿ: ಹುಬ್ಬಳ್ಳಿ ಎರಡನೇ ಅತಿದೊಡ್ಡ ಮಹಾನಗರ ಏನೋ ನಿಜ. ಆದರೆ ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ದಿನಕ್ಕೆ ಸಾವಿರಾರು ಪೋನ್ ಕರೆಗಳು ಬರುತ್ತವೆ ಅದೇ ರೀತಿ ಹೋಗುತ್ತವೆ. ಅದೊಂದು ದಿನ ಮಾತ್ರ ಈ ಹಿಂದೆ ಇದ್ದ ದಾಖಲೆಯನ್ನು ಬ್ರೇಕ್ ಮಾಡಿದೆ. ಹಾಗಿದ್ದರೇ ಯಾವುದು ಆ ದಿನ ಅಂತೀರಾ...? ಆ ದಿನ ನೆನಪಿಸಿಕೊಂಡರೇ ಶಾಕ್ ಆಗುವುದು ಖಂಡಿತ.
ಏಪ್ರಿಲ್ 16 ಶನಿವಾರ ರಾತ್ರಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ದೊಡ್ಡಮಟ್ಟದ ಗಲಾಟೆ, ಕಲ್ಲು ತೂರಾಟ ನಡೆದಿರುವುದು ಗೊತ್ತೆ ಇದೆ. ಈ ಕಲ್ಲು ತೂರಾಟ ಪ್ರಕರಣಕ್ಕೂ ಪೋನ್ ಕರೆಗಳಿಗೂ ಏನು ಸಂಬಂಧ ಅಂತೀರಾ..? ಸಂಬಂಧ ಇದೆ.
ಹೌದು.. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸ್ ತನಿಖೆಯಿಂದ ಬಯಲಾಗಿದೆ ಮತ್ತೊಂದು ಸ್ಟೋಟಕ ವಿಚಾರ. ಗಲಾಟೆ ನಡೆದ ದಿನ ರಾತ್ರಿ ಹೆಚ್ಚು ಪೊನ್ ಕರೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಮಾಮೂಲಿ ದಿನಗಳಲ್ಲಿ ಇರುವ ಕರೆಗಳಿಗಿಂತ ಆ ದಿನ ಮಾತ್ರ ದುಪ್ಪಟ್ಟು ಪೊನ್ ಕರೆಗಳು ದಾಖಲಾಗಿದ್ದು, ಪೊಲೀಸ್ ಇಲಾಖೆಗೆ ಈಗ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ.
ಗಲಭೆ ನಡೆದ ಪ್ರದೇಶದಿಂದ ಏ.16ರ ರಾತ್ರಿ ಅತೀ ಹೆಚ್ಚು ಕರೆಗಳು ದಾಖಲಾಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸುತ್ತಲಿನ ವ್ಯಾಪ್ತಿಯಲ್ಲಿ ಇರುವ 5 ಮೊಬೈಲ್ ಟವರ್ ಮೂಲಕ ಕರೆಯ ದಾಖಲೆಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಗಲಭೆ ದಿನ ರಾತ್ರಿ 8 ರಿಂದ 12ರ ವರೆಗಿನ ಅವಧಿಯಲ್ಲಿ 18 ಸಾವಿರಕ್ಕೂ ಅಧಿಕ ಕರೆ ದಾಖಲಾಗಿವೆ.
ಮಾಮೂಲಿ ದಿನಗಳಲ್ಲಿ 5 ಮೊಬೈಲ್ ಟವರ್ ಗಳಲ್ಲಿ ನಿತ್ಯ 6000 ಕರೆಗಳು ದಾಖಲಾಗುತ್ತಿದ್ದವು. ಆದರೆ ಆ ದಿನ ಜನರನ್ನು ಸೇರಿಸಲು ಫೋನ್ ಕರೆ ಮಾಡಲಾಗಿತ್ತಾ...? ಎಂಬುವಂತ ಅನುಮಾನ ವ್ಯಕ್ತವಾಗಿದ್ದು, ಯಾವ ಯಾವ ದೂರವಾಣಿಯಿಂದ ಎಷ್ಟು ಕರೆಗಳು ದಾಖಲಾಗಿವೆ ಎಂಬುವಂತ ಮಾಹಿತಿ ಲಭ್ಯವಾಗಿದೆ. ಈಗ ಮತ್ತಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಪೋನ್ ಕರೆಗಳ ದಾಖಲಾತಿ ನೋಡಿ ಶಾಕ್ ಆಗಿದ್ದು, ಯಾರೇ ಆರೋಪಿಗಳಾಗಿದ್ದರು ಅವರ ಹೆಡೆಮುರಿ ಕಟ್ಟಲು ಖಾಕಿ ಟೊಂಕ ಕಟ್ಟಿಕೊಂಡು ಸಿದ್ಧವಾಗಿರುವುದು ನಿಜಕ್ಕೂ ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/04/2022 05:16 pm