ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ :ಗಲಭೆ ಪ್ರಕರಣ ಗಂಭೀರವಾಗಿ ಸ್ವೀಕರಿಸಿದ್ದೇವೆ; ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಪ್ರಕರಣದ ಕುರಿತು ಮಾತನಾಡಿ, ಹುಬ್ಬಳ್ಳಿ ಗಲಭೆ ಸಾಮಾನ್ಯವಾದ ಗಲಭೆ ಎಂದು ತೆಗೆದುಕೊಂಡಿಲ್ಲ. ಇದು ಕಾನ್ಫರೆನ್ಸಿ ಇದೆ. ಪೊಲೀಸ್ ಠಾಣೆ ಮೇಲೆ ದೊಡ್ಡ ಸಂಖ್ಯೆಯಲ್ಲಿ ಸಂಘಟನೆ ಆಗಿ ದಾಂಧಲೆ ಮಾಡುತ್ತಾರೆ ಎಂದರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಬೇರೆ ಬೇರೆ ಶಕ್ತಿಗಳ ಹುನ್ನಾರ ಕುಮ್ಮಕ್ಕು ಇದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಈಗಾಗಲೇ ಬಂಧನ ಮಾಡಿದವರ ಕಡೆಯಿಂದ ಪೊಲೀಸರು ಹಲವಾರು ಹೇಳಿಕೆ ಪಡೆದುಕೊಂಡಿದ್ದಾರೆ. ಕೆಲವೇ ದಿನಗಳ ಇದರ ಹಿಂದೆ ಯಾರು ಯಾರು ಇದ್ದಾರೆ. ಸಂಘಟನೆಗಳಿವೆ ಅವುಗಳನ್ನು ಬಯಲಿಗೆ ಎಳೆಯಲಾಗುವುದು. ಅತ್ಯಂತ ಕಠಿಣವಾದ ಕಾನೂನು ತೆಗೆದುಕೊಳ್ಳುತ್ತೇವೆ ಎಂದ ಅವರು ಹೊಸ ಹೊಸ ಸಂಘಟನೆಗಳಿದ್ದರು ಅದರ ಕುರಿತು ತನಿಖೆ ನಡೆಸುತ್ತೇವೆ ಎಂದರು.

ಗುಜರಾತ್ ಮಾದರಿ ರಾಜ್ಯದಲ್ಲಿ ಜಾರಿಗೆ ಬರಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಠಿಣವಾದ ಕ್ರಮ ಎಂದರೆ ಹಲವಾರು ಕ್ರಮಗಳಿವೆ. ಡಿಜೆಹಳ್ಳಿ, ಕೆಜೆ ಹಳ್ಳಿಯಿಂದ ಹಿಡಿದು ಎಲ್ಲವನ್ನೂ ಕೂಡಾ ನಾವು ನೋಡಿದ್ದೇವೆ. ಕಾನೂನಿನ ಬಲವನ್ನು ನಾವು ಕೊಡುತ್ತಿದ್ದೇವೆ. ಇದೊಂದು ರೀತಿಯಲ್ಲಿ ಕರ್ನಾಟಕ ಮಾಡಲ್ ಇರಲಿದೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/04/2022 02:19 pm

Cinque Terre

49.16 K

Cinque Terre

11

ಸಂಬಂಧಿತ ಸುದ್ದಿ