ಹುಬ್ಬಳ್ಳಿ: ಸರ್ಕಾರಿ ಅನುದಾನದಲ್ಲಿ ಕಮಿಷನ್ ಆರೋಪ ವಿಚಾರಕ್ಕೆ, ಮಠಗಳಿಗೆ ಬರುವ ಅನುದಾನದಲ್ಲಿ ರಾಜಕಾರಣಿಗಳು ಕಮಿಷನ್ ತೆಗೆದುಕೊಳ್ಳುತ್ತಾರೆ. ಯಾವುದೇ ಅನುದಾನ ನೀಡಲು ಕಮಿಷನ್ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಕೇಳಿದ್ದೆನೆ ಎಂದು ಚೆನ್ನಬಸವಾನಂದ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ನಾನು ನಮ್ಮ ಮಠಕ್ಕೆ ಯಾವುದೇ ಅನುದಾನವನ್ನ ತೆಗೆದುಕೊಂಡಿಲ್ಲ. ಸರ್ಕಾರ ಕಮಿಷನ್ ಕೇಳುವುದು ನಮ್ಮ ಗಮನಕ್ಕೂ ಬಂದಿದೆ. ಅನುದಾನ ಕೊಡುವಾಗ ಸರ್ಕಾರ, ಅಧಿಕಾರಿಗಳು ಕಮಿಷನ್ ತೆಗೆದುಕೊಂಡೆ ಕೊಡುತ್ತಾರೆ. ಎಲ್ಲಾ ಪಕ್ಷಗಳು ಕಮಿಷನ್ ಕೇಳುತ್ತವೆ. ನಾವು ಸರ್ಕಾರದಿಂದ ಯಾವುದೇ ಅನುದಾನ ಕೇಳಿಲ್ಲ. ಆದರೆ ಕಮಿಷನ್ ತೆಗೆದುಕೊಂಡೇ ಅನುದಾನ ಕೊಡುತ್ತಾರೆ ಎನ್ನುವುದನ್ನು ನಾನು ಕೇಳಿದ್ದೇನೆ ಎಂದು ಗುಡುಗಿದರು.
ಬಿಜೆಪಿಯಲ್ಲಿನ ಸ್ವಾಮೀಜಿಗಳು ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬೇಕಾ? ಕಾವಿ ಬಟ್ಟೆಯನ್ನ ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರೆನೂ? ಸ್ವಾಮೀಜಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ಈ ದೇಶವನ್ನ ತ್ಯಾಗಮಹಿಗಳು ಆಳಬೇಕು, ಅಂದಾಗ ದೇಶ ಉದ್ಧಾರ ಆಗುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 03:27 pm