ಕುಂದಗೋಳ : ಬಿಜೆಪಿ ಪಕ್ಷ ನೀಡಿದ ವಿಪ್ ಉಲ್ಲಂಘಿಸಿದ್ದೇವೆಂದು ಬಿಜೆಪಿ ಜಿಲ್ಲಾಧ್ಯಕ್ಷರು ನಮ್ಮ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ನಮ್ಮನ್ನು ಪರಿಗಣಿಸಿದೇ ನಮ್ಮ ಸದಸ್ಯತ್ವ ರದ್ದಿಗೆ ಆದೇಶ ನೀಡಿದ್ದರು.ಇದೀಗ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಪ.ಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರು ಹೇಳಿದರು.
ಹೌದು ! ಕುಂದಗೋಳ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಕಿರೇಸೂರು ನಾನು ಹಾಗೂ ಸದಸ್ಯರಾಗಿದ್ದ ನೀಲಮ್ಮ ಕುಂದಗೋಳ, ಸುನೀತಾ ಪಾಟೀಲರ ಸದಸ್ಯತ್ವ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳು ಮಾ.31 ರಂದು ಆದೇಶ ನೀಡಿದ್ದರು.
ಈ ವಿಚಾರವಾಗಿ ನಾವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿ ನಮ್ಮ ಪರ ವಕೀಲರಾದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಎಂಬುವವರು ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೋರಿದ್ದು, ಅದು ಪುರಸ್ಕೃತಗೊಂಡಿದೆ ಎಂದರು.
ಬಳಿಕ ಮೂವರು ಸದಸ್ಯರು ಸಂತೋಷದಿಂದ ಪರಸ್ಪರರು ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡರಾದ ಶಶಿಕಾಂತಗೌಡ ಪಾಟೀಲ, ಝಾಕೀರಸಾಬ್ ಅವರಿಗೆ ಸಿಹಿ ತಿನಿಸಿದರು.
ಬಳಿಕ ಬಿಜೆಪಿ ಪಕ್ಷಕ್ಕೆ ನಾವು ಕೆಲಸ ಮಾಡಿದ್ದೇವೆ. ನಮ್ಮನ್ನು ಚುನಾವಣೆ ಸಂದರ್ಭ ಬಳಸಿಕೊಂಡು ಆ ನಂತರ ನಮ್ಮ ಏಳ್ಗೆ ಹತ್ತಿಕ್ಕುವ ಉದ್ದೇಶದಿಂದ ವಿಪ್ ನೆಪದಲ್ಲಿ ನಮ್ಮ ಸದಸ್ಯತ್ವ ರದ್ದು ಮಾಡಿದ್ದಾರೆ. ನಮಗೆ ಜನಾಶೀರ್ವಾದ ಇದೆ. ಈ ಕಾರಣ ಹೈಕೋರ್ಟ್ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಸಿಕ್ಕಿದೆ ಎಂದರು.
Kshetra Samachara
18/04/2022 04:55 pm