ಹುಬ್ಬಳ್ಳಿ: 2009 ರಿಂದ ಹುಬ್ಬಳ್ಳಿ ಬಹಳ ಶಾಂತಿ ಸೌಹಾರ್ದತೆಯಿಂದ ಕೂಡಿತ್ತು. ಆದರೆ ಈಗ ಕಿಡಗೇಡಿಗಳ ಕೃತ್ಯದಿಂದ ಈ ರೀತಿ ಅಶಾಂತಿ ಉಂಟಾಗಿದ್ದು, ಶಾಂತಿ ಸಭೆ ಮಾಡುವ ಮೂಲಕ ಅವಳಿನಗರದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಗಲಾಟೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 2009ರಿಂದ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಅಣ್ಣತಮ್ಮಂದಿರಂತೆ ಇದ್ದರು. ಆದರೆ ಈಗ ಈ ಒಂದು ಕಾರ್ಯ ನಿಜಕ್ಕೂ ಅಶಾಂತಿಯನ್ನು ಹುಟ್ಟು ಹಾಕಿದೆ ಇಂತಹ ಘಟನೆಗಳು ನಡೆಯಬಾರದು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಾವೆಲ್ಲರೂ ಶಾಂತಿಯುತವಾಗಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಆದರೆ ಯಾರೋ ಕಿಡಗೇಡಿಗಳು ಮಾಡಿರುವ ದುಷ್ಕೃತ್ಯದಿಂದ ಗಲಾಟೆಗಳು ನಡೆಯುತ್ತಿವೆ. ಇಂತಹ ಕಾರ್ಯಕ್ಕೆ ಯಾರು ಕೂಡ ಕುಮ್ಮಕ್ಕು ಕೊಡಬಾರದು ಎಲ್ಲರೂ ಸ್ನೇಹ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.
Kshetra Samachara
17/04/2022 05:25 pm