ಹುಬ್ಬಳ್ಳಿ: ರಾಜ್ಯದಲ್ಲಿ ಜಲ ವಿವಾದವನ್ನು ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಮತ್ತೇ ಪಕ್ಷ ಸಂಘಟನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಹದಾಯಿ ನದಿಯ ಉಗಮಸ್ಥಾನ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಕಣಕುಂಬಿಯಲ್ಲಿ ಜೆಡಿಎಸ್ ನೇತೃತ್ವದ ಜಲಧಾರೆ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ನಾಳೆ ಕಣಕುಂಬಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ನೇತೃತ್ವದಲ್ಲಿ ಚಾಲನೆ ಸಿಗಲಿದ್ದು, ಖಾನಾಪೂರ ತಾಲೂಕಿನ ಕಣಕುಂಬಿಯಿಂದ ಚಾಲನೆ ಸಿಗಲಿದೆ ಎಂದರು.
ಇನ್ನೂ ಪಕ್ಷವನ್ನು ಪುನರ್ ಸಂಘಟನೆಯ ಸದುದ್ದೇಶದಿಂದ ಈ ಒಂದು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಅಭಿಯಾನಕ್ಕೆ ಜಿಲ್ಲಾ, ತಾಲ್ಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಮಹದಾಯಿ ಇತ್ಯರ್ಥಕ್ಕೆ ಮಹತ್ವದ ನಿರ್ಧಾರವನ್ನು ಜೆಡಿಎಸ್ ಪಕ್ಷ ತೆಗೆದುಕೊಂಡಿದೆ ಎಂದು ಅವರು ಹೇಳಿದರು.
Kshetra Samachara
15/04/2022 07:39 pm