ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ ಜಾರ್ಜ್ ರನ್ನು ಬಂಧಿಸಲಾಗಿತ್ತೆ...?: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಬಗ್ಗೆ ಈಗಾಗಲೇ ಅವರು ತೀರ್ಮಾನ ಮಾಡಿದ್ದಾರೆ. ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ. ಡಿಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ ಜಾರ್ಜ್ ರನ್ನು ಬಂಧಿಸಲಾಗಿತ್ತೆ? ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಪ್ರಶ್ನಿಸಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಪಡೆಯಲಾಗಿತ್ತು ವಿನಃ ಜಾರ್ಜ್ ಅವರನ್ನು ಬಂಧಿಸಿರಲಿಲ್ಲ ಎಂದು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಮಜಾಯಿಷಿ ನೀಡಿದರು.

ನಿನ್ನೆ ರಾತ್ರಿ ಈಶ್ವರಪ್ಪನವರ ಜತೆ ಮಾತನಾಡಿದ್ದೇನೆ. ಸ್ವಪ್ರೇರಣೆಯಿಂದ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ಆರೋಪ ಮುಕ್ತನಾಗುವ ವಿಶ್ವಾಸ ಅವರಿಗಿದೆ. ಆದಷ್ಟು ಬೇಗ ತನಿಖೆ ಮಾಡಿಸಿ ಎಂದಿದ್ದಾರೆ. ಇಡೀ ಪ್ರಕರಣದ ವಿವಿಧ ಆಯಾಮದಲ್ಲೂ ತನಿಖೆ ಆಗುತ್ತದೆ. ಪೊಲೀಸರು ತಮ್ಮ ಕೆಲಸವನ್ನು ಮಾಡುವುದಕ್ಕೆ ಬಿಡಬೇಕು ಎಂದರು.

ಜಾರ್ಜ್ ಅವರ ರಾಜೀನಾಮೆ ಪಡೆದಿದ್ದರು, ಆದರೇ ಬಂಧಿಸಿರಲಿಲ್ಲ. ರಾಜ್ಯ ಪೊಲೀಸರು, ಸಿಬಿಐ ಬಂಧನ ಮಾಡಿತ್ತಾ...? ವಿರೋಧ ಪಕ್ಷದವರು ತನಿಖಾಧಿಕಾರಿ, ಜಡ್ಜ್ ಆಗುವ ಅವಶ್ಯಕತೆ ಇಲ್ಲ. ತನಿಖೆಯಿಂದ ಸತ್ಯ ಹೊರ ಬರುತ್ತದೆ. ಇಡೀ ಬೆಳವಣಿಗೆ ತನಿಖೆ ಆದ ಮೇಲೆ ಈಶ್ವರಪ್ಪ ಆರೋಪ ಮುಕ್ತರಾಗುತ್ತಾರೆ ಎನ್ನುವುದು ಅವರ ವಿಶ್ವಾಸ. ಸರ್ಕಾರಕ್ಕೆ ಹಿನ್ನಡೆ, ಮುನ್ನಡೆ ಅನ್ನೊ ಮಾತೇ ಇಲ್ಲ ಎಂದು ಹೇಳಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/04/2022 08:30 am

Cinque Terre

60.38 K

Cinque Terre

15

ಸಂಬಂಧಿತ ಸುದ್ದಿ